ಹೆಚ್ಚುತ್ತಿವೆ ಆನ್‌ಲೈನ್‌ ವಂಚನೆ ಪ್ರಕರಣ

  |   Bellarynews

ವೆಂಕೋಬಿ ಸಂಗನಕಲ್ಲು

ಬಳ್ಳಾರಿ: ಇತ್ತೀಚಿನ ದಿನಗಳಲ್ಲಿ ಅಂತರ್ಜಾಲ ಬಳಕೆಯೂ ಹೆಚ್ಚುತ್ತಿದ್ದು, ಆನ್‌ಲೈನ್‌ ವಂಚನೆ ಪ್ರಕರಣಗಳೂ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಆನ್‌ಲೈನ್‌ ಬಳಸುತ್ತಿರುವ ಅನೇಕರು ತಮಗೆ ಅರಿವಿಲ್ಲದಂತೆಯೇ ಹಣಕಳೆದುಕೊಳ್ಳುತ್ತಿದ್ದು, ಲಕ್ಷಾಂತರ ರೂ. ಹಣ ವಂಚಕರ ಕೈ ಸೇರುತ್ತಿದೆ. ಇಷ್ಟೆಲ್ಲ ನಡೆದರೂ ಏನೂ ಮಾಡಲಾಗದ ಸ್ಥಿತಿ ಪೊಲೀಸರದ್ದಾಗಿದೆ.

ಆ್ಯಂಡ್ರಾಯ್ಡ ಮೊಬೈಲ್ ಬಂದಾಗಿನಿಂದ ಅಂತರ್ಜಾಲ ಬಳಕೆ ಹೆಚ್ಚುತ್ತಿದೆ. ಎಲೆಕ್ಟ್ರಾನಿಕ್‌ ವಸ್ತುಗಳಿಂದ ಹಿಡಿದು ಗೃಹಬಳಕೆ ವಸ್ತುಗಳು, ತಿನ್ನುವ ಆಹಾರವನ್ನೂ ಅಂತರ್ಜಾಲದಲ್ಲಿ ಬುಕ್‌ ಮಾಡಿ, ಮನೆಬಾಗಿಲಿಗೆ ತರಿಸಿಕೊಳ್ಳಲಾಗುತ್ತಿದೆ. ಇದರಿಂದ ಒಂದೆಡೆ ಅನುಕೂಲವಾಗಿದ್ದರೆ, ಮತ್ತೂಂದೆಡೆ ಮಾರಕವೂ ಆಗುತ್ತಿದೆ. ಆನ್‌ಲೈನ್‌ ವಂಚನೆ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ 16 ಆನ್‌ಲೈನ್‌ ವಂಚನೆ ಪ್ರಕರಣಗಳು ದಾಖಲಾಗಿವೆ. ದೂರದ ಜಾರ್ಖಂಡ್‌, ಒರಿಸ್ಸಾ, ಗುಜರಾತ್‌, ರಾಜಸ್ಥಾನ ಸೇರಿದಂತೆ ಉತ್ತರ ಭಾರತ ಭಾಗದ ಚಾಲಾಕಿ ಕಳ್ಳರು ಈ ಕೆಲಸ ಮಾಡುತ್ತಿದ್ದಾರೆ. ಪೊಲೀಸರಿಗೆ ಕಿಂಚಿತ್ತೂ ಸುಳಿವು ಸಿಗದ ರೀತಿಯಲ್ಲಿ ಹೈಟೆಕ್‌ ವಂಚನೆಯಲ್ಲಿ ತೊಡಗಿರುವ ಕಳ್ಳರು ಪೊಲೀಸರ ತಲೆಬಿಸಿಗೆ ಕಾರಣರಾಗುತ್ತಿದ್ದಾರೆ.

ಹೈಟೆಕ್‌ ಕಳ್ಳತನ ಹೀಗೆ?: ದೂರದ ರಾಜ್ಯಗಳಲ್ಲಿ ಕುಳಿತು ಅನಾಮಧೇಯ ವ್ಯಕ್ತಿಗಳ ಹೆಸರಲ್ಲಿ ಸಿಮ್‌ ಖರೀದಿಸುವ ಈ ಹೈಟೆಕ್‌ ಕಳ್ಳರು, ಅದೇ ಹೆಸರಲ್ಲಿ ಬ್ಯಾಂಕ್‌ ಖಾತೆಯನ್ನು ಸಹ ತೆರೆಯುತ್ತಾರೆ. ಈ ಸಿಮ್‌ ಕಾರ್ಡ್‌ಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ದೊರೆಯುವ ಡೇಟಾದಲ್ಲಿನ ಮೊಬೈಲ್ ಸಂಖ್ಯೆಗಳನ್ನು ಪಡೆದು, ಅವರಿಗೆ ಮೊಬೈಲ್ ಕರೆ ಮಾಡುತ್ತಾರೆ. ಹೀಗೆ ಕರೆಮಾಡುವ ಕಳ್ಳರು, ನಾವು ಬ್ಯಾಂಕ್‌ನವರು, ನಿಮ್ಮ ಎಟಿಎಂ ಕಾರ್ಡ್‌ ಅವಧಿ ಮುಗಿದಿದ್ದು, ಲಾಕ್‌ ಆಗುವ ಸಂಭವವಿದೆ. ತಕ್ಷಣ ಅದನ್ನು ರಿನಿವಲ್ ಮಾಡಬೇಕು. ಇಲ್ಲದಿದ್ದಲ್ಲಿ ಕಾರ್ಡ್‌ ಬಳಕೆ ಮತ್ತು ಖಾತೆಯ ಹಣ ಲಾಕ್‌ ಆಗುತ್ತದೆ ಎಂದು ಸುಳ್ಳು ಹೇಳುತ್ತಾರೆ. ಇದರಿಂದ ಆತಂಕಕ್ಕೊಳಗಾಗುವ ಅಮಾಯಕರು, ವಂಚಕರು ಕೇಳುವ ಎಟಿಎಂ ಪಿನ್‌ ಸಂಖ್ಯೆ, ಇತರೆ ಗೌಪ್ಯ ಮಾಹಿತಿಯನ್ನೆಲ್ಲ ಫೋನಿನಲ್ಲೇ ನೀಡುತ್ತಾರೆ. ಬಳಿಕ ಆನ್‌ಲೈನ್‌ ಬ್ಯಾಂಕಿಂಗ್‌ ಮೂಲಕ ಖಾತೆಯಲ್ಲಿರುವ ಹಣವನ್ನು ವಸ್ತುಗಳ ಖರೀದಿ ಹೆಸರಲ್ಲಿ ತಮಗೆ ಬೇಕಾದ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ. ಕೂಡಲೇ ತಮ್ಮ ಮೊಬೈಲ್ಗೆ ಸಂದೇಶ ಬಂದಾಗ ಅಮಾಯಕರು ತಾವು ಮೋಸ ಹೋಗಿದ್ದೇವೆ ಎಂದು ತಿಳಿದು ಪೊಲೀಸರ ಮೊರೆ ಹೋಗುತ್ತಾರೆ. ಅಷ್ಟೊತ್ತಿಗೆ ಆಗಲೇ ಹಣ ಕಂಡವರ ಪಾಲಾಗುವುದರ ಜತೆಗೆ ಕರೆ ಸಿಮ್‌ ಸಹ ನಾಟ್ ರೀಚಬಲ್ ಆಗಿರುತ್ತದೆ. ಇನ್ನು ಬ್ಯಾಂಕ್‌ ಖಾತೆ ಹೆಸರಲ್ಲಾದರೂ ಹೈಟೆಕ್‌ ವಂಚಕರನ್ನು ಪತ್ತೆಹಚ್ಚಲು ಬಲೆ ಬೀಸುವ ಪೊಲೀಸರಿಗೆ ಅದು ನಿರಾಶ್ರಿತರೊ, ವಯೋವೃದ್ಧರೋ, ರೋಗಿಗಳಧ್ದೋ ವಿಳಾಸ ಆಗಿರುತ್ತದೆ. ವಂಚಕರು ಮೊದಲೇ ಪ್ಲಾನ್‌ ಮಾಡಿ ಅಮಾಯಕರ ಹೆಸರಲ್ಲಿ ವ್ಯವಸ್ಥಿತವಾಗಿ ಆನ್‌ಲೈನ್‌ ಮೂಲಕ ಹಣವನ್ನು ದೋಚುತ್ತಿದ್ದಾರೆ....

ಫೋಟೋ - http://v.duta.us/dJGVXAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/FXoJVAAA

📲 Get Bellary News on Whatsapp 💬