ಹುಲಿಕಟ್ಟಿ:ವರುಣನ ಕೃಪೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ

  |   Haverinews

ಬಂಕಾಪುರ: ಪರಮಾತ್ಮನಿಂದ ವರವನ್ನು ಪಡೆದುಕೊಂಡಿರುವ ಕಪ್ಪೆ ಮತ್ತು ಕತ್ತೆಗಳು ತಮಗೆ ಕುಡಿಯಲು ನೀರಿನ ಕೊರತೆ ಕಂಡುಬಂದಾಗ ವರುಣನನ್ನು ಆಕರ್ಷಿಸುವ ಶಕ್ತಿ ಹೊಂದಿವೆ ಎಂದು ಫಕ್ಕೀರಸ್ವಾಮಿ ಹಿರೇಮಠ ಶಾಸ್ತ್ರೀಗಳು ಹೇಳಿದರು.

ಹುಲಿಕಟ್ಟಿ ಗ್ರಾಮದಲ್ಲಿ ಸಮೃದ್ಧ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಕಪ್ಪೆಗಳ ಮದುವೆ ಸಮಾರಂಭದಲ್ಲಿ ಮಾತನಾಡಿದ ಅವರು, ಕಷ್ಟ ಬಂದಾಗ ಕತ್ತೆ ಕಾಲು ಹಿಡಿ ಎಂಬ ನಾಣ್ಣುಡಿಯಂತೆ ನಮ್ಮ ಪೂರ್ವಜರ ಕಾಲದಿಂದ ನಡೆದು ಬಂದ ಸಂಪ್ರದಾಯಗಳು ಇಂದಿಗೂ ಫಲ ನೀಡುತ್ತಿವೆ. ಆದ್ದರಿಂದ ಕಪ್ಪೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎಂಬ ವಿಶ್ವಾಸ ಸಾರ್ವಜನಿಕರಲ್ಲಿ ಪುರಾಣ ಕಾಲದಿಂದಲೂ ಮುಂದುವರೆದುಕೊಂಡು ಬಂದಿದೆ ಎಂದು ಹೇಳಿದರು.

ತನ್ನಿಮಿತ್ತ ಗ್ರಾಮದ ಹೊರವಲಯದಲ್ಲಿರುವ ಪ್ರಾಚೀನ ಕಾಲದ ಕಲ್ಮೇಶ್ವರ ದೇವರಿಗೆ ರೈತಾಪಿ ಕುಟುಂಬದವರಿಂದ ಪಂಚಾಮೃತ ಅಭಿಷೇಕ, ಸಹಸ್ರ ಬಿಲ್ವಾರ್ಚನೆ, ಸಹಸ್ರ ನಾಮಾವಳಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಗ್ರಾಮಸ್ಥರು ಕಪ್ಪೆಗಳ ಮದುವೆಯನ್ನು ವಿಧಿ ವಿಧಾನಗಳ ಪ್ರಕಾರ ಕಪ್ಪೆಗಳಿಗೆ ಅರಿಷಿಣ ಕೊಂಬು ಕಟ್ಟಿ (ತಾಳಿ) ಹೂ ಮಾಲೆಗಳನ್ನು ಹಾಕಿ ಮದುವೆಯ ಗಟ್ಟಿ ಮೇಳ, ಮಂತ್ರೋಪದೇಶದೊಂದಿಗೆ ಅಕ್ಷತೆ ಹಾಕಿ ಮದುವೆ ಮಾಡಿದರು....

ಫೋಟೋ - http://v.duta.us/pHSryQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/dV9jlQAA

📲 Get Haveri News on Whatsapp 💬