ಹಳ್ಳಿಗರಿಗೆ ಚತುಷ್ಪಥ ಶಾಪ

  |   Uttara-Kannadanews

ಕುಮಟಾ: ತಾಲೂಕಿನಲ್ಲಿ ಹಾದು ಹೋಗುವ ರಾ.ಹೆ. 66(17)ರ ಚತುಷ್ಪಥ ಕಾಮಗಾರಿ ತಾಲೂಕಿನ ಕೆಲ ಗ್ರಾಮಗಳಿಗೆ ಶಾಪವಾಗಿ ಪರಿಣಮಿಸಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಮಳೆಗಾಲದಲ್ಲಿ ತಂಡ್ರಕುಳಿ ಗ್ರಾಮದಲ್ಲಿ ಮತ್ತೆ ಗುಡ್ಡ ಕುಸಿತದ ಭೀತಿ ಎದುರಾದರೆ, ಖೈರೆ ಮತ್ತು ದುಂಡಕುಳಿ ಗ್ರಾಮ ಸೇರಿದಂತೆ ಕೆಲಭಾಗಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

ಆಮೆಗತಿಯ ಕಾಮಗಾರಿ: ಚತುಷ್ಪಥ ಕಾಮಗಾರಿ ಪ್ರಾರಂಭಗೊಂಡು 4 ವರ್ಷಗಳು ಕಳೆದರೂ ಕೆಲಸ ಮಾತ್ರ ಇನ್ನೂ ಆಮೆಗತಿಯಲ್ಲಯೇ ಸಾಗುತ್ತಿದೆ. ಅವೈಜ್ಞಾನಿಕ ಕಾಮಗಾರಿಯಿಂದಾಗಿ 11 ಜೂನ್‌ 2017 ರಂದು ಮೊದಲ ಮಳೆಗೇ ತಂಡ್ರಕುಳಿ ಗ್ರಾಮದ ಮನೆಗಳ ಮೇಲೆ ಗುಡ್ಡ ಕುಸಿದು ಭಾರೀ ಅನಾಹುತವಾಗಿತ್ತು. ಮೂರು ಜೀವಗಳ ಬಲಿಯಾಗಿತ್ತು. ಹಲವರು ಗಾಯಗೊಂಡಿದ್ದರು. ಇನ್ನು ಕೆಲವೆ ಇನ್ನಿತರ ಸಮಸ್ಯೆ ಉದ್ಭವಿಸಿ ಹಲವು ಹೋರಾಟ, ಪ್ರತಿಭಟನೆಗಳು ನಡೆದವು. ಆದರೆ ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ.

ಸ್ಥಗಿತಗೊಂಡ ಸ್ಥಳಾಂತರ: ಅಘನಾಶಿನಿ ನದಿ ಹಾಗೂ ರಾ.ಹೆ. ಗುಡ್ಡದ ನಡುವಿನ 50 ರಿಂದ 100 ಮೀ. ಅಗಲದಲ್ಲಿ ಜನವಸತಿ ವ್ಯಾಪಿಸಿರುವ ತಂಡ್ರಕುಳಿಯಲ್ಲಿ 52 ಕುಟುಂಬಗಳಿಂದ 200ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗುಡ್ಡ ಕುಸಿತದ ನಂತರ ಗ್ರಾಮಸ್ಥರ ಸ್ಥಳಾಂತರಕ್ಕೆ ಜಿಲ್ಲಾಡಳಿತ ನಿರ್ಧರಿಸಿತು. ಮಳೆಗಾಲದ ನಾಲ್ಕು ತಿಂಗಳಿಗೆ ಸೀಮಿತವಾಗಿ ಸ್ಥಳಾಂತರಗೊಳ್ಳುವ ನಿರ್ಣಯದಂತೆ ತಂಡ್ರಕುಳಿ ಜನರಿಗೆ ತಲಾ 10,000 ರೂ ಹಣಸಹಾಯದ ಭರವಸೆ ನೀಡಲಾಗಿತ್ತು. ಆದರೆ ಯಾರಿಗೂ ಮೊದಲ ತಿಂಗಳು ಹಣಸಹಾಯ ಕೊಡದಿರುವುದರಿಂದ ಎಲ್ಲರೂ ಮರಳಿ ಮನೆ ಸೇರಿಕೊಂಡಿದ್ದಾರೆ....

ಫೋಟೋ - http://v.duta.us/LmgcdgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/dWVJawAA

📲 Get Uttara Kannada News on Whatsapp 💬