11 ಸಾವಿರ ಶಾಲಾ ಮಕ್ಕಳಿಗೆ ಸ್ವಚ್ಛತಾ ಸಾಮಗ್ರಿಗಳ ವಿತರಣೆ

  |   Mandyanews

ಮಂಡ್ಯ: ಶೌಚಮುಕ್ತ, ಹೊಗೆ ಮುಕ್ತ ಗ್ರಾಮ, ವಿದ್ಯಾರ್ಥಿಗಳಿಗೆ ಉಚಿತ ಪಾಸ್‌ ನೀಡುವ ಮೂಲಕ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮಗಳೊಂದಿಗೆ ಗ್ರಾಮೀಣರ ಗಮನ ಸೆಳೆದಿರುವ ಮಳವಳ್ಳಿಯ ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಇದೀಗ ಸರ್ಕಾರಿ ಶಾಲಾ ಮಕ್ಕಳಿಗೆ ನೈಲ್ ಕಟರ್‌ ಸೇರಿದಂತೆ ಚಿತ ಸ್ವಚ್ಛತಾ ಸಾಮಗ್ರಿ ವಿತರಿಸುವ ಮೂಲಕ ಶುಚಿತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದೆ.

ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಡಾ.ಬಿ.ಎಸ್‌.ಶಿವಣ್ಣ ಮಳವಳ್ಳಿ ತಾಲೂಕು ಬಂಡೂರು ಪಂಚಾಯಿತಿಗೆ ಸೇರಿದ ಬಂಡೂರು, ಕಲ್ಲಾರೆಪುರ, ಗಟ್ಟಿಕೊಪ್ಪಲು, ಸಸಿಲಾರಪುರ, ದಡದಪುರ, ಗಾಣಿಗನಪುರ, ಅಚ್ಚಮ್ಮನ ಕೊಪ್ಪಲು ವಿನಲ್ಲಿರುವ ಸರ್ಕಾರಿ ಶಾಲಾ ಮಕ್ಕಳಿಗೆ ನೈಲ್ಕಟರ್‌, ಟೂತ್‌ಪೇಸ್ಟ್‌, ಬ್ರಶ್‌, ಕೊಬ್ಬರಿ ಎಣ್ಣೆ, ಬಡ್ಸ್‌ಗಳನ್ನು ಶಾಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿದ್ದಾರೆ.

ಶುಚಿತ್ವ ಮಕ್ಕಳಿಂದಲೇ ಆರಂಭಿಸಿ: ಜೂ.11 ಮತ್ತು 12ರಂದು ಹಲಗೂರು ಹಾಗೂ ಬಿ.ಜಿ.ಪುರ ಹೋಬಳಿಯ 270 ಶಾಲೆಗಳಲ್ಲಿರುವ 11 ಸಾವಿರ ಮಕ್ಕಳಿಗೆ ಈ ಸ್ವಚ್ಛತಾ ಸಾಮಗ್ರಿಗಳನ್ನು ನೀಡಲು ನಿರ್ಧರಿಸಲಾಗಿದೆ. ಶುಚಿತ್ವ ಎನ್ನುವುದು ಮಕ್ಕಳಿಂದಲೇ ಆರಂಭವಾಗಬೇಕು. ಅವರಿಂದಲೇ ಅದು ಬೆಳವಣಿಗೆ ಕಂಡಾಗ ಸ್ವಚ್ಛ ಹಾಗೂ ಆರೋಗ್ಯಕರ ನಿರ್ಮಾಣ ಸಾಧ್ಯ ಎಂಬ ಉದ್ದೇಶದೊಂದಿಗೆ ಶಾಲಾ ಹಂತದಲ್ಲೇ ಮಕ್ಕಳಿಗೆ ಸ್ವಚ್ಛತೆಯ ಅರಿವು ಮೂಡಿಸಲು ಡಾ.ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಮಾಡುತ್ತಿ ರುವುದು ಉತ್ತಮವಾದ ಕೆಲಸ ಎಂದು ಪ್ರಶಂಸಿದರು....

ಫೋಟೋ - http://v.duta.us/EhIxMAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/MsX2lwAA

📲 Get Mandya News on Whatsapp 💬