ಆನ್‌ಲೈನ್‌ ಆ್ಯಪ್‌ ಮೂಲಕ ತುರ್ತು ಪರಿಸ್ಥಿತಿ ಎದುರಿಸಲು ನಗರಸಭೆ ಸಿದ್ಧ

  |   Udupinews

ಉಡುಪಿ: ಪ್ರಸ್ತುತ ಸಾಲಿನ ಮಳೆಗಾಲದ ತುರ್ತು ಪರಿಸ್ಥಿತಿಯನ್ನು ಎದುರಿಸಲು ನಗರಸಭೆ ಸನ್ನದ್ಧಗೊಂಡಿದೆ. ಇದೇ ಮೊದಲ ಬಾರಿಗೆ ಆನ್‌ಲೈನ್‌ ಆ್ಯಪ್‌ ಮೂಲಕ ಬರುವ ದೂರುಗಳನ್ನು ಶೀಘ್ರವಾಗಿ ಪರಿಹರಿಸಲು ಕಾರ್ಯಪಡೆ ಸಿದ್ಧವಾಗಿದೆ.

ಉಡುಪಿ ಹೆಲ್ಪ್ ಆ್ಯಪ್‌

ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ತುರ್ತು ಸ್ಪಂದನೆ ಗಾಗಿ ಉಡುಪಿ ಹೆಲ್ಪ್ ಆ್ಯಪ್‌ ರಚಿಸಲಾಗಿದೆ. 35 ವಾರ್ಡ್‌ಗಳ ಸಾರ್ವಜನಿಕರು ಆ್ಯಪ್‌ನ ಮೂಲಕ ಮಲೇರಿಯಾ, ಮರ ಬಿದ್ದು ರಸ್ತೆ ಹಾನಿ, ವಿದ್ಯುತ್‌ ಕಂಬ ಬಿದ್ದು ಮನೆ ಹಾಗೂ ರಸ್ತೆ ಹಾನಿ, ನೆರೆ ಪೀಡಿತ ಪ್ರದೇಶ, ಸಿಡಿಲು ಬಡಿದು ಮನೆ ಹಾಗೂ ಪ್ರಾಣ ಹಾನಿ, ಚರಂಡಿ ನೀರು ಹರಿಯುವುದು, ಭೂ ಕುಸಿತ, ಕಟ್ಟಡ ಕುಸಿತ ಸೇರಿದಂತೆ ಇತರೆ ದೂರಗಳನ್ನು ಈ ಆ್ಯಪ್‌ನಲ್ಲಿ ದಾಖಲಿಸಬಹುದು.

ವಾರ್ಡ್‌ವಾರು ಟಾಸ್ಕ್ಫೋರ್ಸ್‌

ಮಳೆ ತಂದೊಡ್ಡಬಹುದಾದ ಎಲ್ಲ ಸಮಸ್ಯೆ ಎದುರಿಸಲು ಪ್ರತಿ ವಾರ್ಡ್‌ನಲ್ಲಿಯೂ ತುರ್ತು ಕಾರ್ಯಪಡೆ ರಚಿಸಲಾಗಿದೆ. ನಗರಸಭೆಯನ್ನು 3 ವಿಭಾಗಗಳನ್ನಾಗಿ ವಿಂಗಡಿಸಿ ಕಮೀಷನರ್‌, ಎಂಜಿನಿಯರ್‌ಗಳಿಗೆ ಜವಾಬ್ದಾರಿ ನೀಡಲಾಗಿದೆ.

ರಾ.ಹೆ. 169ಎ ಕಾಮಗಾರಿ ಸಮಸ್ಯೆ

ರಾ.ಹೆ. 169ಎ ಮಲ್ಪೆ -ಕಡಿಯಾಳಿಯಲ್ಲಿ ಕಾಮಗಾರಿ ಅಪೂರ್ಣಗೊಂಡಿದೆ. ಕೆಲವೊಂದು ಪ್ರದೇಶದಲ್ಲಿ ಒಳಚರಂಡಿ ನಿರ್ಮಾಣವಾಗದ ಹಿನ್ನೆಲೆಯಲ್ಲಿ ರಾ.ಹೆ. ಸಮೀಪದ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗುವ ಸಾಧ್ಯತೆಯಿದೆ....

ಫೋಟೋ - http://v.duta.us/RNepSQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/E6HDVgAA

📲 Get Udupi News on Whatsapp 💬