ಉತ್ತಮ ಆರೋಗ್ಯಕ್ಕೆ ಯೋಗಾಭ್ಯಾಸ ಅತ್ಯಗತ್ಯ: ಪುಷ್ಪಾ

  |   Chikkamagalurunews

ಚಿಕ್ಕಮಗಳೂರು: ಯೋಗಾಭ್ಯಾಸ, ಪ್ರಾಣಾಯಾಮಗಳಿಗೆ ಯಾವುದೇ ಜಾತಿ, ಮತ ಭೇದವಿಲ್ಲ. ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಪ್ರತಿಯೊಬ್ಬರಿಗೂ ಯೋಗ ಅತ್ಯಗತ್ಯ ಎಂದು ಎಸ್‌ಪಿವೈಎಸ್‌ಎಸ್‌ ಜಿಲ್ಲಾ ಸಂಚಾಲಕಿ ಪುಷ್ಪಾ ಮೋಹನ್‌ ಹೇಳಿದರು.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಎಸ್‌ಪಿವೈಎಸ್‌ಎಸ್‌ ಯೋಗ ಸಂಸ್ಥೆ ನಗರ ಹೊರವಲಯದ ಆಶಾಕಿರಣ ಅಂಧ ಮಕ್ಕಳ ಪಾಠಶಾಲೆಯಲ್ಲಿ ಏರ್ಪಡಿಸಿದ್ದ ವಿಶೇಷ ಚೇತನ ಮಕ್ಕಳ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ತರಬೇತಿ ನೀಡಿ ಮಾತನಾಡಿದರು.

ಯೋಗ ಮನುಷ್ಯನ ಆರೋಗ್ಯವಂತ ಜೀವನಕ್ಕೆ ಅತೀ ಹೆಚ್ಚು ಅನುಕೂಲಕರವಾಗಿದೆ.ನಿತ್ಯ ಜೀವನದ ಜಂಜಾಟದಲ್ಲಿ ಇಂದಿನ ಕಲಬೆರಕೆ ಆಹಾರ ಸೇವನೆಯಿಂದ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿರುವುದನ್ನು ನೋಡುತ್ತಿದ್ದೇವೆ. ಯೋಗ ಶಿಬಿರಗಳಲ್ಲಿ ನೀರು-ಆಹಾರ ಸೇವಿಸುವ ವಿಧಾನ, ಮನಶಾಂತಿ, ಲವಲವಿಕೆಯ ಕಾರ್ಯಚಟುವಟಿಕೆಗೆ ಸಹಕಾರಿಯಾಗುವ ವಿವಿಧ ಆಸನಗಳನ್ನು ಕಲಿಯಬಹುದಾಗಿದೆ ಎಂದರು.

ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಯೋಗ ಕಲಿಸುವಂತಹ ಭಾಗ್ಯ ಇಂದು ನಮಗೆ ದೊರೆತಿರುವುದು ಸುಯೋಗ. ಸಮಾಜದಲ್ಲಿ ಎಲ್ಲರಂತೆ ವಿಕಲಚೇತನರು ಕೂಡ ಉತ್ತಮ ಜೀವನ ನಡೆಸಬೇಕು ಎಂಬುದೇ ನಮ್ಮ ಮುಖ್ಯ ಉದ್ದೇಶ ಎಂದು ತಿಳಿಸಿದರು.

ಯೋಗ ದಿನಾಚರಣೆಯಲ್ಲಿ ಮಾತ್ರ ಯೋಗಭ್ಯಾಸ ಮಾಡಿದರೆ ಪ್ರಯೋಜನವಿಲ್ಲ. ಪ್ರತಿ ಮನೆಯಲ್ಲೂ ಪ್ರತಿದಿನ ಯೋಗಾಭ್ಯಾಸ ಮಾಡಬೇಕೆಂಬುದು ಎಸ್‌ಪಿವೈಎಸ್‌ಎಸ್‌ ಸಮಿತಿ ಧ್ಯೇಯೋದ್ದೇಶ. ಕಳೆದ 15 ವರ್ಷಗಳಿಂದ ಸಮಿತಿಯಿಂದ ಸಹಸ್ರಾರು ಉಚಿತ ಯೋಗ ಶಿಬಿರಗಳು ನಡೆದಿದ್ದು, ಹತ್ತಾರು ಸಾವಿರ ಜನರಿಗೆ ಯೋಗದ ಮಹತ್ವ ತಿಳಿಸಲಾಗಿದೆ. ನಿತ್ಯ ಯೋಗದ ಮೂಲಕ ಸಮಾಜದ ಪ್ರತಿಯೊಬ್ಬರೂ ಆರೋಗ್ಯವಂತ ಜೀವನ ನಡೆಸಬೇಕೆಂದರು....

ಫೋಟೋ - http://v.duta.us/tqyvrQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/FzHPjgAA

📲 Get Chikkamagaluru News on Whatsapp 💬