ಎಳ್ಳಾರೆ: 12 ಲಕ್ಷ ರೂ. ವೆಚ್ಚದ ಓವರ್‌ ಹೆಡ್‌ ಟ್ಯಾಂಕ್‌ ಉದ್ಘಾಟನೆ

  |   Udupinews

ಅಜೆಕಾರು: ಕಡ್ತಲ ಗ್ರಾ.ಪಂ. ವ್ಯಾಪ್ತಿಯ ರಸ್ತೆ, ಸೇತುವೆ, ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಹೆಚ್ಚಿನ ಅನುದಾನ ಒದಗಿಸಲಾಗಿದ್ದು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಅನುದಾನ ನೀಡುವ ಭರವಸೆಯನ್ನು ಶಾಸಕ ಸುನಿಲ್ ಕುಮಾರ್‌ ನೀಡಿದರು.

ಎಳ್ಳಾರೆಯ ಹೆಬ್ಟಾರ್‌ ಜಡ್ಡು ಎಂಬಲ್ಲಿ ಸುಮಾರು 12 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣವಾದ ಓವರ್‌ ಹೆಡ್‌ ಟ್ಯಾಂಕ್‌ನ್ನು ಉದ್ಘಾಟಿಸಿ ಅನಂತರ ಎಳ್ಳಾರೆ ಮುಳ್ಕಾಡು ಸ.ಕಿ.ಪ್ರಾ. ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಡ್ತಲ ಗ್ರಾ.ಪಂ. ಅಧ್ಯಕ್ಷರಾದ ಅರುಣ್‌ ಕುಮಾರ್‌ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕಂದಾಯ ಉಪಕಾರ್ಯದರ್ಶಿ ಸದಾಶಿವ ಪ್ರಭು, ತಾ.ಪಂ. ಸದಸ್ಯರಾದ ಸುಲತಾ ನಾಯ್ಕ, ಎಪಿಎಂಸಿ ನಿರ್ದೇಶಕ ದಿನೇಶ್‌ ಪೈ, ಕ್ಯಾಂಪ್ಕೋ ನಿರ್ದೇಶಕ ದಯಾನಂದ ಹೆಗ್ಡೆ, ತಾ.ಪಂ. ಸದಸ್ಯ ರಮೇಶ್‌ ಕುಮಾರ್‌, ಪಿಡಿಒ ಫ‌ರ್ಜಾನಾ ಎಂ., ವರಂಗ ಗ್ರಾ.ಪಂ. ಅಧ್ಯಕ್ಷ ಸುರೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಸಮ್ಮಾನ

ಸ್ಥಳ ದಾನ ನೀಡಿದ ಅಶೋಕ್‌ ಆಚಾರ್ಯ, ಗುತ್ತಿಗೆ ದಾರ ಗಣೇಶ್‌ ಕುಲಾಲ್, ಹಿರಿಯರಾದ ವೆಂಕಟರಾಯ ನಾಯಕ್‌ ಹಾಗೂ ಜಿಲ್ಲಾ ಪಂಚಾಯತ್‌ ಸದಸ್ಯೆ ಜ್ಯೋತಿಹರೀಶ್‌ ಅವರನ್ನು ಸಮ್ಮಾನಿಸಲಾಯಿತು....

ಫೋಟೋ - http://v.duta.us/YODI3QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Ze0YQAEA

📲 Get Udupi News on Whatsapp 💬