‘ಕೊಡುಗೆ ಸದುಪಯೋಗದಿಂದ ದಾನಿಗಳಿಗೆ ಸಂತೃಪ್ತಿ’

  |   Udupinews

ಸಿದ್ದಾಪುರ: ಸಮಾಜದಲ್ಲಿರುವ ಹಣವಂತರು ದಾನ ಮಾಡಬೇಕೆಂಬ ನಿಯಮ ಇಲ್ಲ. ಒಳ್ಳೆಯ ಮನಸ್ಸಿರುವವರು ಸಮಾಜಕ್ಕಾಗಿ ದಾನ ಮಾಡುತ್ತಾರೆ. ದಾನ ಮಾಡಿದವರ ದಾನ ಸದುಪಯೋಗವಾದಾಗ ದಾನಿಗಳಿಗೆ ಅದೇ ಸಂತೃಪ್ತಿ ಎಂದು ಗೀತಾ ಎಚ್.ಎಸ್‌.ಎನ್‌. ಫೌಂಡೇಶನ್‌ ಕೋಟೇಶ್ವರ ಇದರ ಅಧ್ಯಕ್ಷ ಶಂಕರ ಐತಾಳ್‌ ಅಮಾಸೆಬೈಲು ಹೇಳಿದರು.

ಅವರು ಬೆಳ್ವೆ ಶ್ರೀ ಸಂದೇಶ ಕಿಣಿ ಮೆಮೋರಿಯಲ್ ಚಾರಿಟೆಬಲ್ ಫೌಂಡೇಶನ್‌ ಬೆಳ್ವೆ ಹಾಗೂ ಗೀತಾ ಎಚ್.ಎಸ್‌.ಎನ್‌. ಫೌಂಡೇಶನ್‌ ಕೋಟೇಶ್ವರ ಇವುಗಳ ಜಂಟಿ ಆಶ್ರಯದಲ್ಲಿ ಉಳ್ಳೂರು-74 ಗ್ರಾಮದ ವಾರಾಹಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕೊಡಮಾಡಿದ ಸಮವಸ್ತ್ರ, ನೋಟ್ ಪುಸ್ತಕ ವಿತರಣೆ ಮಾಡಿ ಮಾತನಾಡಿದರು.

ಉದ್ಯಮಿ ಸತೀಶ ಕಿಣಿ ಬೆಳ್ವೆ ಅವರು ತಮ್ಮ ಸಂಪಾದನೆಯಲ್ಲಿ ಸಮಾಜಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ತಮ್ಮ ಮಗನ ಹೆಸರಿನಲ್ಲಿ ಬೆಳ್ವೆ ಶ್ರೀ ಸಂದೇಶ ಕಿಣಿ ಮೆಮೋರಿಯಲ್ ಚಾರಿಟೆಬಲ್ ಫೌಂಡೇಶನ್‌ ಎನ್ನುವ ಟ್ರಸ್ಟ್‌ನ್ನು ಆರಂಭಿಸಿ, ಸಾವಿರಾರು ರೋಗಿಗಳಿಗೆ ನೆರವಾಗಿದ್ದಾರೆ. ಹಲವು ವಿದ್ಯಾರ್ಥಿ ಗಳಿಗೆ ಪ್ರತಿ ವರ್ಷ ಕಲಿಕಾ ಸಾಮಗ್ರಿ ವಿತರಿಸುತ್ತಿದ್ದಾರೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ರತ್ನಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದರು....

ಫೋಟೋ - http://v.duta.us/2hDQZAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/0Ls3mgAA

📲 Get Udupi News on Whatsapp 💬