ಕುಡಿವ ನೀರಿನ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹ

  |   Chikkaballapuranews

ಗೌರಿಬಿದನೂರು: ಕಳೆದ ಜನವರಿ ತಿಂಗಳಿನಿಂದ ಕುಡಿಯುವ ನೀರು, ದಿನ ಬಳಕೆಯ ನೀರು ಬಿಡುತ್ತಿಲ್ಲ ಎಂದು ಆರೋಪಿಸಿ ಗೌರಿಬಿದನೂರು ನಗರ ವ್ಯಾಪ್ತಿಯ ಸದಾಶಿವ ಮತ್ತು ವಿಘ್ನೇಶ್ವರ ಬಡಾವಣೆಯ ನಿವಾಸಿಗಳು ಶನಿವಾರ ಕೊಳವೆ ಬಾವಿಗಳ ಮುಂದೆ ನಿಂತು ಪ್ರತಿಭಟಿಸಿದರು.

ಇಲ್ಲಿನ ವಾಸಿಗಳಾದ ಸುಮಲತಾ ಮಾತನಾಡಿ, ಕಳೆದ ಆರೇಳು ತಿಂಗಳಿನಿಂದ ಸಮರ್ಪಕವಾಗಿ ನೀರು ಬಿಡುತ್ತಿಲ್ಲ. ನಗರಸಭೆ ಅನೇಕ ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಕನಿಷ್ಟ ಒಂದು ವಾರ ಅಥವಾ 15ದಿನಗಳಿಗೊಮ್ಮೆ ನೀರು ಬಿಡಿ ಎಂದು ಹೇಳಿದ್ದರೂ ತಿಂಗಳಿಗೊಮ್ಮೆಯೂ ಬಿಡಲಿಲ್ಲ. ಈಗಾಗಲೇ 6 ತಿಂಗಳಿನಿಂದ 600 ರಿಂದ 800 ರೂ. ಪಾವತಿಸಿ ಖಾಸಗಿ ಟ್ಯಾಂಕರ್‌ಗಳಿಂದ ನೀರು ಕೊಂಡುಕೊಳ್ಳುತ್ತಿದ್ದೇವೆ ಎಂದರು.

ಇಲ್ಲಸಲ್ಲದ ಸಬೂಬು: ಸದಾಶಿವ ಬಡಾವಣೆಯಲ್ಲಿ 3 ಕೊಳವೆ ಬಾವಿಗಳಿದ್ದು, ಸಮರ್ಪಕವಾಗಿ ನೀರು ಬರುತ್ತಿದೆ. ಆದರೆ ನ‌ಮಗೆ ನೀರು ಬಿಡುತ್ತಿಲ್ಲ. ನಗರಸಭೆ ಸಿಬ್ಬಂದಿಯನ್ನು ಕೇಳಿದರೆ ವಿದ್ಯುತ್‌ ಸಂಪರ್ಕವಿಲ್ಲ, ಪಂಪ್‌ ಅಳವಡಿಸಿಲ್ಲ, ಬೋರ್‌ವೆಲ್‌ ಕೆಟ್ಟಿದೆ. ರಿಪೇರಿ ಆಗಬೇಕಿದೆ ಎಂಬ ಸಬೂಬುಗಳನ್ನು ಹೇಳುತ್ತಿದ್ದಾರೆ. ಬೋರ್‌ವೆಲ್‌ಗ‌ಳಲ್ಲಿ ನೀರು ಬರುತ್ತಿದ್ದರೂ ಸಹ ನೀರು ಬಿಡದೇ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು....

ಫೋಟೋ - http://v.duta.us/8FG9QAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/OJkZCQAA

📲 Get Chikkaballapura News on Whatsapp 💬