ಕನ್ನಡ-ಮರಾಠಿ ನಡುವೆ ಅನುವಾದ ಕಮ್ಮಟ ಸಂಪರ್ಕ ಸೇತುವೆ

  |   Bijapur-Karnatakanews

ಸೊಲ್ಲಾಪುರ: ಕನ್ನಡದಿಂದ ಮರಾಠಿಗೆ, ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಎರಡು ಭಾಷೆಗಳ ಮಧ್ಯೆ ಭಾಷಾ ಬಾಂಧವ್ಯ ಬೆಳೆಸುವುದರ ಜೊತೆಗೆ ಅನುವಾದ ಕಮ್ಮಟ ಸಂಪರ್ಕದ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಹೇಳಿದರು.

ಅಕ್ಕಲಕೋಟ ನಗರದ ಲೋಕಾಪುರೆ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಹಾಗೂ ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ ಸಹಯೋಗದಲ್ಲಿ ನಡೆದ ಕನ್ನಡದಿಂದ ಮರಾಠಿಗೆ ಸಣ್ಣ ಕಥೆಗಳ ಅನುವಾದ ಕಮ್ಮಟದಲ್ಲಿ ಅವರು ಮಾತನಾಡಿದರು.

ನಮ್ಮ ಬಹು ಭಾಷಾ ರಾಷ್ಟ್ರಕ್ಕೆ ಅನುವಾದಕರೇ ಸಾರಥಿಗಳು. ಕೃತಿಕಾರ ಸೃಷ್ಟಿರ್ಕತನಾದರೆ ಅನುವಾದಕ ಮರು ಸೃಷ್ಟಿಕರ್ತ. ಹೀಗಾಗಿ ಅವನು ದೇವರ ದೇವ. ಅನುವಾದಕರು ಜಾತಿ-ಧರ್ಮ, ಭೇದ-ಭಾವ ಮರೆತು ರಾಷ್ಟ್ರ ಕಟ್ಟುವ ಕಾರ್ಯವನ್ನು ಮಾಡುತ್ತಿದ್ದಾರೆ. ಎರಡು ಭಾಷೆಗಳ ಹೃದಯ ಸಮ್ಮೇಲನದಿಂದ ಅನುವಾದವಾಗುತ್ತದೆ. ವಿವಿಧ ಭಾಷೆಗಳ ಮೇಲೆ ಪ್ರಭುತ್ವ ಉಳ್ಳವರು ಮಾತ್ರ ಅನುವಾದಕರಾಗಲು ಸಾಧ್ಯ ಎಂದರು.

ಹಿರಿಯ ಅನುವಾದಕ ಚಂದ್ರಕಾಂತ ಪೋಕಳೆ ಮಾತನಾಡಿ, ಭಾರತ ದೇಶದಲ್ಲಿ ಹೆಜ್ಜೆ-ಹೆಜ್ಜೆಗೂ ಬೇರೆ-ಬೇರೆ ಭಾಷೆಗಳಿವೆ. ಅವರದ್ದೇ ಆದ ಸಾಹಿತ್ಯ, ಸಂಸ್ಕೃತಿಗಳಿವೆ. ಎರಡು ಭಾಷೆಗಳ ಸಾಹಿತ್ಯವನ್ನು ಪರಸ್ಪರ ಕೊಡು ಕೊಳ್ಳುವಿಕೆಯಿಂದ ಭಾಷಾ ಮನೋಭಾವ ಹೆಚ್ಚಾಗುತ್ತದೆ. ಹೀಗಾಗಿ ಕನ್ನಡದ ಭಾಷಾ ಸಾಹಿತ್ಯವನ್ನು ಬೇರೆ-ಬೇರೆ ಭಾಷೆಗಳಿಗೆ ಅನುವಾದಿಸುವ ಮೂಲಕ ಕನ್ನಡ ಸಾಹಿತ್ಯವನ್ನು ರಾಷ್ಟ್ರ ಮಟ್ಟದಲ್ಲಿ ಬಲಪಡಿಸಬೇಕು ಎಂದರು....

ಫೋಟೋ - http://v.duta.us/GTinfwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/6ykm1AAA

📲 Get Bijapur Karnataka News on Whatsapp 💬