ಕಿಸಾನ್‌ ಸಮ್ಮಾನ್‌: ಶಿರಸಿಯಲ್ಲೇ ಹೆಚ್ಚು ನೋಂದಣಿ

  |   Uttara-Kannadanews

ಶಿರಸಿ: ಪ್ರಧಾನ ಮಂತ್ರಿಗಳ ಕಿಸಾನ್‌ ಸಮ್ಮಾನ ಯೋಜನೆ ಬರಲಿರುವ ಜೂ.30 ಕ್ಕೆ ಕೊನೆಗೊಳ್ಳಲಿದ್ದು, ಜಿಲ್ಲಾಡಳಿತ ಅರ್ಹ ರೈತರು ದಾಖಲೆ ಸಹಿತ ಅರ್ಜಿ ಸಲ್ಲಿಕೆಗೆ ಮನವಿ ಮಾಡಿದೆ. ಇಡೀ ಜಿಲ್ಲೆಯಲ್ಲಿ ಶಿರಸಿಯಲ್ಲೇ ಅಧಿಕ ರೈತರು ಕಿಸಾನ್‌ ಸಮ್ಮಾನ ಯೋಜನೆಗೆ ಹೆಸರು ನೊಂದಾಯಿಸಿದ್ದಾರೆ.

ಪ್ರಧಾನ ಮಂತ್ರಿಗಳು ಲೋಕಸಭಾ ಚುನಾವಣೆಗೆ ಮೊದಲೇ ಘೋಷಣೆ ಮಾಡಿದ ರೈತರಿಗೆ ವಾರ್ಷಿಕ 6 ಸಾವಿರ ರೂ.ಗಳನ್ನು ಮೂರು ಕಂತಿನಲ್ಲಿ ನೀಡುವ ಯೋಜನೆ ಇದು. ಪಹಣಿ ಪತ್ರಿಕೆ, ಆಧಾರ ಕಾರ್ಡ್‌ ಪ್ರತಿ, ಫೋಟೊ, ಬ್ಯಾಂಕ್‌ ಪಾಸ್‌ಬುಕ್‌ಗಳ ಪ್ರತಿ ಜೊತೆ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ, ವಿವಿಧ ಇಲಾಖೆ ಅಥವಾ ಗ್ರಾಪಂಗಳ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ರೈತರು ಮುದ್ರಿತ ಅರ್ಜಿ ಭರಣ ಮಾಡಿ ಸಲ್ಲಿಸಿದರೆ ಆಯಾ ಕೇಂದ್ರದಲ್ಲಿ ಕಂಪ್ಯೂಟರ್‌ನಿಂದ ದಾಖಲಿಸುತ್ತಾರೆ. ಇದಕ್ಕೆಂದೇ ಪ್ರತ್ಯೇಕ ಪಿಎಂ ಕಿಸ್ಸಾನ್‌ ಎಂಬ ವೆಬ್‌ಸೈಟ್ ಕೂಡ ಕಾರ್ಯಮಾಡುತ್ತಿದೆ. ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಕೂಡ ಅರ್ಜಿ ಸಲ್ಲಿಸಬಹುದು.

ಕೆಲವು ತಾಲೂಕುಗಳಲ್ಲಿ ಶೇ.55ಕ್ಕಿಂತ ಅಧಿಕ ರೈತರು ಅರ್ಜಿ ಭರಣ ಮಾಡಬೇಕಿದ್ದು, ಆದಷ್ಟು ಶೀಘ್ರ ತುಂಬಿ ಕೊಡುವಂತೆ ಜಿಲ್ಲಾಡಳಿತ ಸೂಚಿಸಿದೆ....

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/OdLlMgAA

📲 Get Uttara Kannada News on Whatsapp 💬