ಖಾರವಾಯಿತು ಹಸಿ ಮೆಣಸಿನಕಾಯಿ

  |   Dharwadnews

ಧಾರವಾಡ: ಮುಂಗಾರು ವಿಳಂಬದಿಂದ ಬಿತ್ತನೆಗೆ ರೈತ ಸಮುದಾಯ ಹಿಂದೇಟು ಹಾಕುತ್ತಿರುವ ಸನ್ನಿವೇಶದಲ್ಲಿ ಜಿಲ್ಲೆಯಲ್ಲಿ ಈಗ ಹಸಿ ಮೆಣಸಿನಕಾಯಿ ಬೆಳೆದ ರೈತರು ಕೀಟಬಾಧೆಯಿಂದ ಕಂಗಾಲಾಗಿದ್ದಾರೆ. ಜೊತೆಗೆ ಮುಂದೆ ಹಸಿ ಹಾಗೂ ಒಣ ಮೆಣಸಿನಕಾಯಿ ಬೆಳೆಯಲು ಕಾಯುತ್ತಿರುವ ರೈತರೂ ಆತಂಕಕ್ಕೆ ಒಳಗಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 340 ಹೆಕ್ಟೇರ್‌ ಪ್ರದೇಶದಲ್ಲಿ ನೀರಾವರಿಯಿಂದ ಹಸಿ ಮೆಣಸಿನಕಾಯಿ ಬೆಳೆ ಬೆಳೆಯಲಾಗಿದ್ದು, ಇನ್ನೇನು ಇಳುವರಿ ಕೈ ಸೇರುವ ಕಾಲ ಸನ್ನಿಹಿತದಲ್ಲಿದೆ. ಆದರೆ ಹವಾಮಾನ ವೈಪರೀತ್ಯ ಹಾಗೂ ಮಳೆ ಬಾರದೇ ಮೋಡ ಕವಿದ ವಾತರಣದಿಂದ ಈ ಬೆಳೆಗೆ ಕೀಟಬಾಧೆ ಶುರುವಾಗಿದೆ.

ಕ್ಷೀಣಿಸಿದ ಹಸಿ ಮೆಣಸಿನಕಾಯಿ: ಜಿಲ್ಲೆಯಲ್ಲಿ ವಾರ್ಷಿಕ 2 ಸಾವಿರ ಹೆಕ್ಟೇರ್‌ದಲ್ಲಿ ಹಸಿ ಮೆಣಸಿನಕಾಯಿ ಬೆಳೆಯಲಾಗುತ್ತಿದ್ದು, ನೀರಾವರಿ ವ್ಯವಸ್ಥೆ ಬಳಕೆ ಮಾಡಿ ಈವರೆಗೆ 340 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದೆ. ಈ ರೈತರು ಬೋರ್‌ವೆಲ್ ನೆಚ್ಚಿಕೊಂಡಿದ್ದು, ಬೋರ್‌ವೆಲ್ಗಳಿಂದ ನೀರಿನ ಲಭ್ಯತೆ ಕಡಿಮೆ ಆದ ಕಾರಣ ಬಿತ್ತನೆ ಪ್ರಮಾಣದ ಮೇಲೆ ನೇರ ಹೊಡೆತ ಬೀಳುವಂತೆ ಮಾಡಿದೆ. ಸದ್ಯ ಬೆಳೆದು ನಿಂತು ಇಳುವರಿ ಸಮಯದಲ್ಲಿ ಕಂಡು ಬಂದಿರುವ ರೋಗ ಲಕ್ಷಣಗಳು ರೈತರ ಮೊಗದಲ್ಲಿ ಚಿಂತೆ ಮೂಡುವಂತೆ ಮಾಡಿದೆ. ಇನ್ನೂ ಜೂನ್‌ ತಿಂಗಳಲ್ಲಿ ಮಳೆಯಾಶ್ರಿತವಾಗಿ ಹಸಿ ಮೆಣಸಿನಕಾಯಿ ಬೆಳೆಯುವ ರೈತರು ಮಳೆಗಾಗಿ ಕಾಯುತ್ತಿದ್ದು, ಸದ್ಯಅವರಿಗೆ ಈಗ ರೋಗದ ಭೀತಿ ಇಲ್ಲ....

ಫೋಟೋ - http://v.duta.us/DCQ-XgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/bbk0OAAA

📲 Get Dharwad News on Whatsapp 💬