ಗುರುಪುರ ಸೇತುವೆ ಫೆಬ್ರವರಿಯಲ್ಲಿ ಲೋಕಾರ್ಪಣೆ

  |   Dakshina-Kannadanews

ಗುರುಪುರ: ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಫಲ್ಗುಣಿ ನದಿಗೆ ಗುರುಪುರದಲ್ಲಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಜಿಲ್ಲೆಯಲ್ಲೇ ಅತಿ ಶೀಘ್ರ ಮುಕ್ತಾಯಗೊಳ್ಳಲಿರುವ ಕಾಮಗಾರಿ ಇದೆಂಬ ಹೆಗ್ಗಳಿಕೆ ಪಾತ್ರವಾಗಲಿದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದರು.

ಅವರು ಶನಿವಾರ ಗುರುಪುರದಲ್ಲಿ ಸೇತುವೆ ಕಾಮಗಾರಿಯ ಪ್ರಗತಿ ವೀಕ್ಷಿಸಿ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸೇತುವೆ ಕಾಮಗಾರಿ 2019ರ ಫೆಬ್ರವರಿ 21ಕ್ಕೆ ಆರಂಭಗೊಂಡಿದ್ದು, 2021ರ ಫೆಬ್ರವರಿ 20ರಂದು ಪೂರ್ಣಗೊಳಿಸುವ ಕರಾರಿನ ಮೇರೆಗೆ ಕಾವೂರಿನ ಮೊಗರೋಡಿ ಕನ್‌ಸ್ಟ್ರಕ್ಷನ್‌ ಕಂಪೆನಿಗೆ ಗುತ್ತಿಗೆ ನೀಡಲಾಗಿತ್ತು. ಟೆಂಡರು ಪಡೆದ ತತ್‌ಕ್ಷಣ ಕಾಮಗಾರಿ ಆರಂಭಿಸಿರುವ ಕಂಪೆನಿ, ಬೇಸಗೆಯಲ್ಲಿ ಕ್ಷಿಪ್ರಗತಿಯಲ್ಲಿ ಪಿಲ್ಲರ್‌ ಹಾಕುವ ಕೆಲಸ ಮುಗಿಸಿದೆ. ಮಳೆಗಾಲದಲ್ಲಿ ಗರ್ಡರ್‌ ಮತ್ತು ಸ್ಲಾ ್ಯಬ್‌ ಅಳವಡಿಕೆ ನಡೆಯಲಿದೆ. ನಿಗದಿತ ಅವಧಿಯ ಒಳಗಡೆ ಲೋಕಾರ್ಪಣೆಗೊಳ್ಳಲಿದೆ ಎಂದರು.

39.420 ಕೋಟಿ ರೂ. ಅಂದಾಜು ವೆಚ್ಚದ ಹೊಸ ಸೇತುವೆ ಯೋಜನೆಯಲ್ಲಿ 25 ಮೀಟರ್‌ ಉದ್ದದ ಏಳು ಅಂಕಣಗಳಿವೆ. ಅಗಲ 16 ಮೀ. ಅಗಲದ ಸೇತುವೆಯು 11 ಮೀ. ಅಗಲ ರಸ್ತೆ, 2.50 ಮೀ. ಅಗಲದ ಕಾಲುದಾರಿ (ಎರಡೂ ಕಡೆ) ಇತ್ಯಾದಿ ಹೊಂದಿರುತ್ತದೆ. ಎರಡೂ ಕಡೆ 500 ಮೀ. ಉದ್ದಕೆ ಕೂಡುರಸ್ತೆ ನಿರ್ಮಾಣಗೊಳ್ಳಲಿದೆ ಎಂದರು....

ಫೋಟೋ - http://v.duta.us/RJdPxQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Ob-h4gAA

📲 Get Dakshina Kannada News on Whatsapp 💬