ಗ್ರಾಮವಾಸ್ತವ್ಯ ಮುಂದೂಡಿಕೆಗೆ ಮೂಡಿವೆ ರೆಕ್ಕೆಪುಕ್ಕ

  |   Kalburaginews

•ಹಣಮಂತರಾವ ಭೈರಾಮಡಗಿ

ಕಲಬುರಗಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇರೂರ ಬಿ. ಗ್ರಾಮದ ವಾಸ್ತವ್ಯ ಹಾಗೂ ಜನತಾ ದರ್ಶನ ಮುಂದೂಡಿಕೆ ಇಲ್ಲವೇ ರದ್ದಾಗಲು ಮಳೆಯ ಜತೆಗೆ ಬೇರೆ ಕಾರಣಗಳುಂಟೇ ?

– ಈ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಯಾದಗಿರಿ ಜಿಲ್ಲೆ ಚಂಡರಕಿಯಲ್ಲಿ ಗ್ರಾಮವಾಸ್ತವ್ಯ ವೇಳೆ ಸಿಎಂ ಎದುರೇ ವೇದಿಕೆಯಲ್ಲಿ ಸರ್ಕಾರದ ಪಾಲುದಾರರಾದ ದೋಸ್ತಿಗಳ ಮಧ್ಯೆ ಕಿತ್ತಾಟ, ಮತ್ತೂಂದೆಡೆ ಸರ್ಕಾರದ ಭವಿಷ್ಯದ ಬಗ್ಗೆ ಜೆಡಿಎಸ್‌ ವರಿಷ್ಠ ದೇವೇಗೌಡ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಸಿದ್ಧರಾಮಯ್ಯ ನೀಡಿದ ತದ್ವಿರುದ್ಧ ಹೇಳಿಕೆ ಬಿಸಿತುಪ್ಪವಾಗಿದ್ದಾಗ ಕಾಕತಾಳೀಯ ಎಂಬಂತೆ ಮಳೆ ಸುರಿದಿದ್ದು ಬಿಸೋ ದೊಣ್ಣೆಯಿಂದ ಸಿಎಂರನ್ನು ಪಾರು ಮಾಡಿತು ಎಂದೂ ಹೇಳಲಾಗುತ್ತಿದೆ.

ಎಲ್ಲಕ್ಕೂ ಮಿಗಿಲಾಗಿ ಚಂಡರಕಿಯ ಕಾರ್ಯಕ್ರಮದ ವೇಳೆ ಎಲ್ಲಿ ನೋಡಿದರಲ್ಲಿ ಜೆಡಿಎಸ್‌ ಧ್ವಜಗಳೇ ರಾರಾಜಿಸುತ್ತಿದ್ದಿದ್ದು ಹಾಗೂ ಕಟೌಟ್‌ಗಳಲ್ಲಿ ಕಾಂಗ್ರೆಸ್‌ ನಾಯಕರ ಫೋಟೋಗಳು ಪ್ರಮುಖವಾಗಿ ಕಾಣದೇ ಹೋಗಿದ್ದು ಮೈತ್ರಿ ನಾಯಕರ ಕಿತ್ತಾಟಕ್ಕೆ ಕಾರಣವಾಗಿತ್ತು. ಹೇರೂರ ಬಿ. ಗ್ರಾಮದ ವಾಸ್ತವ್ಯದಲ್ಲಿ ಇದಕ್ಕೆ ತದ್ವಿರುದ್ಧವಾದ ಸನ್ನಿವೇಶಗಳು ಎದುರಾದರೆ ಇಲ್ಲದ ಉಸಾಬರಿ ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬ ಧೋರಣೆಯೂ ಮುಂದೂಡಿಕೆಗೆ ಮಗದೊಂದು ಕಾರಣ ಎನ್ನಲಾಗುತ್ತಿದೆ....

ಫೋಟೋ - http://v.duta.us/FCjFDgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/5qtZmgAA

📲 Get Kalburagi News on Whatsapp 💬