ಚುರುಕುಗೊಂಡ ಮಹಾಲಿಂಗಪುರ ತಾಲೂಕು ಹೋರಾಟ

  |   Bagalkotnews

ಮಹಾಲಿಂಗಪುರ: ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿ ಘೋಷಿಸಲು ಆಗ್ರಹಿಸಿ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರಿಗೆ ಮನವಿ ಸಲ್ಲಿಸಲು ತಾಲೂಕಾ ಹೋರಾಟ ಸಮಿತಿ ನಿಯೋಗ ಜೂ. 24ರಂದು ಬೆಂಗಳೂರಿಗೆ ತೆರಳಲಿದೆ ಎಂದು ಮಹಾಲಿಂಗಪುರ ತಾಲೂಕಾ ಹೋರಾಟ ಸಮಿತಿ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ ಹೇಳಿದರು.

ಎಪಿಎಂಸಿ ವರ್ತಕರ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಪೂರ್ವದಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ಕಂದಾಯ ಸಚಿವರಿಗೆ ನಿಯೋಗವು ಭೇಟಿಯಾಗಿ ಮಹಾಲಿಂಗಪುರವನ್ನು ತೇರದಾಳ ತಾಲೂಕಿನಲ್ಲಿ ಸೇರಿಸಿದ್ದಕ್ಕೆ ನಮ್ಮ ವಿರೋಧವಿದೆ. ಜಮಖಂಡಿ ತಾಲೂಕಿನಲ್ಲಿ ರಬಕವಿ-ಬನಹಟ್ಟಿ, ತೇರದಾಳ ತಾಲೂಕನ್ನಾಗಿ ಘೋಷಿಸಿರುವುದರಿಂದ ಅದೇ ಮಾದರಿಯಲ್ಲಿ ಮುಧೋಳ ತಾಲೂಕಿನ ಹಲವು ಹಳ್ಳಿಗಳನ್ನು ಸೇರಿಸಿ ಮಹಾಲಿಂಗಪುರವನ್ನು ತಾಲೂಕಾಗಿ ಘೋಷಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದ್ದೇವೆ ಎಂದರು.

ಈಗ ಮತ್ತೆ ನಿಯೋಗದೊಂದಿಗೆ ತೆರಳಿ ಸಿಎಂ ಮತ್ತು ಸಂಬಂಧಿಸಿದ ಇಲಾಖೆಗಳ ಸಚಿವರಿಗೆ ಮನವಿ ಸಲ್ಲಿಸಿ ಮಹಾಲಿಂಗಪುರ ತಾಲೂಕಾ ಕೇಂದ್ರವಾಗುವರೆಗೂ ಪಕ್ಷಾತೀತ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದರು.

ವಿವಿಧ ಪಕ್ಷಗಳ ಮುಖಂಡರಾದ ಎಸ್‌.ಎಂ.ಉಳ್ಳೇಗಡ್ಡಿ, ಚನಬಸು ಹುರಕಡ್ಲಿ, ಧರೆಪ್ಪ ಸಾಂಗಲಿಕರ, ಸೈದಾಪುರ ಗ್ರಾಪಂ ಅಧ್ಯಕ್ಷ ಮಹಾಲಿಂಗಪ್ಪ ಸನದಿ, ಸಿದ್ದು ಶಿರೋಳ, ಜಯರಾಮಶೆಟ್ಟಿ ಮಾತನಾಡಿ, ಮಹಾಲಿಂಗಪುರವನ್ನು ತೇರದಾಳ ತಾಲೂಕಿನಲ್ಲಿ ಸೇರಿಸಿದ್ದರಿಂದಾಗಿ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಮುಧೋಳ, ರಬಕವಿ-ಬನಹಟ್ಟಿ, ತೇರದಾಳ ಮೂರು ತಾಲೂಕಿಗೆ ಅಲೆದಾಡುವಂತಾಗಿದೆ. ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿಸಲು 26 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ಸಹ ಒಗ್ಗಟ್ಟು ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ಹಿನ್ನಡೆಯಾಗಿದೆ. ಈ ಬಾರಿ ಮಾತ್ರ ತಾಲೂಕಾ ಕೇಂದ್ರ ಆಗುವರೆಗೂ ಹೋರಾಟ ನಿರಂತರವಾಗಿ ಮತ್ತು ಪಕ್ಷಾತೀತವಾಗಿ ಮಾಡೋಣ. ಇದಕ್ಕೆ ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ 9 ಗ್ರಾಮಗಳ ಜನರು ಒಗ್ಗಟ್ಟಾಗಿ ಹೋರಾಟಕ್ಕೆ ಸಹಕಾರ ನೀಡಬೇಕು ಎಂದರು....

ಫೋಟೋ - http://v.duta.us/DnPsCwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/gw8k6QAA

📲 Get Bagalkot News on Whatsapp 💬