ಜಮೀನು ಹಸ್ತಾಂತರ ಪ್ರಕ್ರಿಯೆಗೆ ಚಾಲನೆ

  |   Udupinews

ಉಡುಪಿ: ಕರಾವಳಿ ಮತ್ತು ಮಲೆನಾಡು ಭಾಗದ ಪೊಲೀಸರ ತರಬೇತಿಗೆ ಕೇಂದ್ರ ಹಾಗೂ ಅವರ ಮಕ್ಕಳಿಗೆ ಶಿಕ್ಷಣ ಒದಗಿ ಸುವ ಪಬ್ಲಿಕ್‌ ಸ್ಕೂಲ್‌ನ ಕನಸು ನನಸಾಗುವ ಲಕ್ಷಣ ಗೋಚರಿಸಿದೆ.

ಈ ಎರಡೂ ಯೋಜನೆಗಳಿಗೆ ಬೇಕಾದ ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದ ಪ್ರಕ್ರಿಯೆಗೆ ಚಾಲನೆ ಸಿಕ್ಕಿರುವುದು ಪೊಲೀಸ್‌ ಸಿಬಂದಿಯಲ್ಲಿ ಆಶಾವಾದ ಮೂಡಿಸಿದೆ.

ಪ್ರತ್ಯೇಕ ಕಟ್ಟಡಗಳಲ್ಲಿ ಈ ಸಂಸ್ಥೆಗಳ ಆರಂಭಕ್ಕೆ 2013-14ನೇ ಸಾಲಿನ ಬಜೆಟ್‌ನಲ್ಲಿ 75 ಲ.ರೂ. ನೀಡಲಾಗಿತ್ತು. ಆದರೆ ಆರು ವರ್ಷಗಳಾದರೂ ಜಾಗದ ಸಮಸ್ಯೆ ಬಗೆಹರಿದಿರಲಿಲ್ಲ.

ಇಪ್ಪತ್ತು ಎಕ್ರೆ ಪ್ರದೇಶ

ಉಡುಪಿ ತಾಲೂಕಿನ ಉಪ್ಪೂರು ಗ್ರಾಮದಲ್ಲಿ 36 ಎಕ್ರೆ ಜಮೀನನ್ನು ಪರಂಬೋಕು ಶೀರ್ಷಿಕೆಯಿಂದ ವಿರಹಿತಗೊಳಿಸಿ ಪೊಲೀಸ್‌ ಇಲಾಖೆಗೆ ನೀಡಲು ಜಿಲ್ಲಾಧಿಕಾರಿಯವರು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿ ಹಲವು ವರ್ಷಗಳಾಗಿದ್ದವು. ಪ್ರಯೋಜನವಾಗಿರಲಿಲ್ಲ. ಈಗ ಮತ್ತೆ ಪ್ರಕ್ರಿಯೆ ಆರಂಭವಾಗಿದೆ. ಪ್ರಾದೇಶಿಕ ಆಯುಕ್ತರ ಕಚೇರಿ, ‘ಉದ್ದೇಶಿತ ಯೋಜನೆಗೆ ಅಗತ್ಯಕ್ಕಿಂತ ಹೆಚ್ಚಿನ ಜಮೀನು ನೀಡಲಾಗದು’ ಎಂದು ತಿಳಿಸಿದೆ. ಹಾಗಾಗಿ 36ರ ಬದಲು 20 ಎಕ್ರೆಗೆ ಸೀಮಿತ ಗೊಳಿಸಿ ಮರು ಪ್ರಸ್ತಾವ ಸಲ್ಲಿಸಲು ಜಿಲ್ಲಾಡಳಿತ ಸಜ್ಜಾಗಿದೆ....

ಫೋಟೋ - http://v.duta.us/IP8WTwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/-HD-IgAA

📲 Get Udupi News on Whatsapp 💬