ತ್ರಿವಳಿ ತಲಾಖ್‌: ಕಾಂಗ್ರೆಸ್‌ ನಿಲುವಿಗೆ ಒತ್ತಾಯ

  |   Karnatakanews

ಹುಬ್ಬಳ್ಳಿ: ತ್ರಿವಳಿ ತಲಾಖ್‌ ಮಸೂದೆಯ ಪರಿಚಯ ಹಂತದಲ್ಲೇ ಕಾಂಗ್ರೆಸ್‌ ಸೇರಿ ಕೆಲ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಮಹಿಳಾ ಸಬಲೀಕರಣ ಬಗ್ಗೆ ಮಾತನಾಡುವ ಕಾಂಗ್ರೆಸ್‌ ನಾಯಕರು ತ್ರಿವಳಿ ತಲಾಖ್‌ ಬಗೆಗಿನ ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಒತ್ತಾಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ರಿವಳಿ ತಲಾಖ್‌ ಹಾಗೂ ಹಲಾಲ್‌ ನಾಗರಿಕ ಸಮಾಜಕ್ಕೆ ಯೋಗ್ಯವೇ ಎಂಬುದನ್ನು ಕಾಂಗ್ರೆಸ್‌ ಸ್ಪಷ್ಟಪಡಿಸಬೇಕು ಎಂದರು. ರಚನಾತ್ಮಕ ಚರ್ಚೆಗೆ ತಯಾರು ಎಂದು ಹೇಳುವ ಕಾಂಗ್ರೆಸ್‌ ನಾಯಕರು ಮಸೂದೆ ಪರಿಚಯ ಹಂತದಲ್ಲಿ ವಿರೋಧ ಮಾಡುತ್ತಾರೆ.

ಹೀಗೇಕೆ ಎಂದು ಕೇಳಿದರೆ ತಮ್ಮಷ್ಟಕ್ಕೆ ತಾವೇ ಗೊಂದಲದಲ್ಲಿದ್ದಾರೆ. ನಾಯಕರಿಲ್ಲದ ಕಾರಣ ಇನ್ನೂ ಗೊಂದಲದಲ್ಲಿ ಕಾಂಗ್ರೆಸ್‌ ಪಕ್ಷವಿದ್ದು, ದಿಕ್ಕು ತಪ್ಪಿದಂತಾಗಿ ದಿವಾಳಿತನ ಪ್ರದರ್ಶಿಸುತ್ತಿದೆ ಎಂದು ಲೇವಡಿ ಮಾಡಿದರು. ತ್ರಿವಳಿ ತಲಾಖ್‌ನಲ್ಲಿ ಯಾವುದೇ ಧರ್ಮ ಹಾಗೂ ಪೂಜಾ ವಿಧಾನವಿಲ್ಲ. ಹಿಂದೆ ಸುಪ್ರೀಂ ಕೋರ್ಟ್‌ ತೀರ್ಮಾನವಾಗಿದೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಾರೆ.

ಕ್ರಮ ಕೈಗೊಳ್ಳುವ ಕಠಿಣ ಕಾನೂನುಗಳು ಇಲ್ಲದಿದ್ದರೆ ಸುಪ್ರೀಂ ಕೋರ್ಟ್‌ನ ತೀರ್ಪು ಕೂಡ ನಿರರ್ಥಕವಾಗುವ ಸಾಧ್ಯತೆಗಳಿವೆ. ಇವೆಲ್ಲವುಗಳ ಕುರಿತು ಚಿಂತನೆ ಮಾಡಿರುವ ಕೇಂದ್ರ ಸರಕಾರ ಮಸೂದೆ ಜಾರಿ ಮಾಡಲು ಸಿದ್ಧವಾಗಿದೆ. ಈ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರು ದೇಶದ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಬಾರದು. ವಿರೋಧ ಪಕ್ಷದ ನಾಯಕರ ಸ್ಥಾನ ಆಯ್ಕೆ ಕುರಿತು ಕಾನೂನಿನಲ್ಲಿ ಏನಿದೆ ಆ ಪ್ರಕಾರ ಆಗುತ್ತದೆ ಎಂದು ತಿಳಿಸಿದರು....

ಫೋಟೋ - http://v.duta.us/CI68YgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/D8UUBgAA

📲 Get Karnatakanews on Whatsapp 💬