ತೆಲಂಗಾಣ ಸಿಎಂ ಜತೆ ಚರ್ಚಿಸಿ ಕ್ರಮ

  |   Yadgirinews

ಯಾದಗಿರಿ: ತೆಲಂಗಾಣ ರಾಜ್ಯದ ಸಂಗಂಬಂಡಾ ಹಳ್ಳದ ಬ್ಯಾರೇಜ್‌ ಹಿನ್ನೀರಿನಿಂದ ಗುರುಮಠಕಲ್ ಕ್ಷೇತ್ರದ ಹಳ್ಳಿಗಳ 400 ಎಕರೆ ಜಮೀನು ಮುಳುಗಡೆ ಭೀತಿ ಇದೆ. ಸಂಕ್ಲಾಪುರ, ಚಲ್ಹೇರಿ, ಇಡ್ಲೂರು, ಜೈಗ್ರಾಂ ಭಾಗದ ರೈತರಲ್ಲಿ ಆತಂಕ ಇದೆ. ಇಂಜಿನಿಯರ್‌ಗಳನ್ನು ಕಳುಹಿಸಿ ಸಮಸ್ಯೆಗಳ ಮಾಹಿತಿ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ಚಂಡರಕಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಶಾಸಕರು ಗಮನಕ್ಕೆ ತಂದಿದ್ದು, ಪರಿಹಾರ ಕುರಿತು ತೆಲಂಗಾಣ ಸಿಎಂ ಜತೆ ಚರ್ಚಿಸಿ ಯಾವ ರೀತಿ ಕ್ರಮ ವಹಿಸಬೇಕು ಎನ್ನುವ ತೀರ್ಮಾನಕ್ಕೆ ಬರಲಾಗುವುದು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಹಳ್ಳಿಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಕಲ್ಪಿಸುವಂತೆ ಗ್ರಾಮೀಣ ಕುಡಿಯುವ ನೀರಿನ ಇಲಾಖೆಗೆ ಸೂಚನೆ ನೀಡಲಾಗಿದೆ. ಗುರುಮಠಕಲ್ಗೆ ವಿಶೇಷವಾಗಿ ಶಾಸಕ ನಾಗನಗೌಡ ಕಂದಕೂರ ಅವರು ಹಲವು ಬೇಡಿಕೆಗಳ ಕುರಿತು ಗಮನಕ್ಕೆ ತಂದಿದ್ದಾರೆ. ಎಲ್ಲವನ್ನೂ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು.

ನಿಯಮಾವಳಿಗಳ ಸಡಿಲಿಕೆ ಬಗ್ಗೆ ತೀರ್ಮಾನ: ಹೈಕ ಭಾಗಕ್ಕೆ ಶಿಕ್ಷಕ ನೇಮಕಾತಿಯಲ್ಲಿ ಅರ್ಹತಾ ಪರೀಕ್ಷೆ ನಿಯಮಾವಳಿಗಳ ಸಡಿಲಿಕೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು....

ಫೋಟೋ - http://v.duta.us/BIxzvQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/SPWuTQAA

📲 Get Yadgiri News on Whatsapp 💬