ನಗರದ 36 ರಸ್ತೆಗಳು ಸ್ಮಾರ್ಟ್‌

  |   Bangalore-Citynews

ಬೆಂಗಳೂರು: ಸ್ಮಾರ್ಟ್‌ಸಿಟಿ ಯೋಜನೆ ಅಡಿ 36ರಸ್ತೆಗಳನ್ನು ಅಭಿವೃದ್ಧಿಪಡಿಸಲು ಬಿಬಿಎಂಪಿ ಮುಂದಾಗಿದೆ. ಈಗಿರುವ ರಸ್ತೆಗಳ ಜತೆಗೆ ಮತ್ತಷ್ಟು ರಸ್ತೆಗಳು “ಸ್ಮಾರ್ಟ್‌’ ಪಟ್ಟಿಗೆ ಸೇಪರ್ಡೆಯಾಗಲಿವೆ.

ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರಾಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿಕೊಳ್ಳಲಾಗಿದ್ದು, ಅದರಂತೆ ನಗರದ ಹೃದಯ ಭಾಗದಲ್ಲಿರುವ ಕಮರ್ಷಿಯಲ್‌ಸ್ಟ್ರೀಟ್‌, ಇನ್ಫೆಂಟ್ರಿ ರಸ್ತೆ, ರಾಜಭವನ ರಸ್ತೆ, ಕಾನ್ವೆಂಟ್‌ರಸ್ತೆ, ಕಸ್ತೂರಬಾ ರಸ್ತೆ ಸೇರಿದಂತೆ ಒಟ್ಟು 36 ರಸ್ತೆಗಳನ್ನು 2 ಹಂತಗಳಲ್ಲಿ ಟೆಂಡರ್‌ಶ್ಯೂರ್‌ ರಸ್ತೆಗಳಾಗಿ ಬದಲಾಗಲಿವೆ.

ಟೆಂಡರ್‌ ಶ್ಯೂರ್‌ಗೆ ಆಯ್ಕೆ ಮಾಡಿಕೊಂಡಿರುವ ರಸ್ತೆಗಳಿಗಾಗಿ ವಿಶೇಷ ಉದ್ದೇಶ ವಾಹಕ(ಎಸ್‌ಪಿವಿ)ರಚಿಸಲಾಗಿದೆ. ಈಗಾಗಲೇ ಗುರುತಿಸಿರುವ ರಸ್ತೆಗಳಿಗೆ ಪಾಲಿಕೆಯು ವಿಸ್ತೃತ ಯೋಜನಾ ವರದಿ(ಡಿಪಿಆರ್‌)ಯನ್ನು ಸಿದ್ಧಪಡಿಸಲಾಗಿದ್ದು, 36ರಸ್ತೆಗಳ ಅಭಿವೃದ್ಧಿ ಟೆಂಡರ್‌ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ.

ಮೊದಲ ಹಂತದಲ್ಲಿ 20 ಸ್ಮಾರ್ಟ್‌ ರಸ್ತೆಗಳು: “ಸ್ಮಾರ್ಟ್‌ಸಿಟಿ ಅಡಿ ಅಭಿವೃದ್ಧಿಯಾಗಲಿರುವ 36 ರಸ್ತೆಗಳಲ್ಲಿ ಮೊದಲ ಹಂತದಲ್ಲಿ 20 ರಸ್ತೆಗಳ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾರ್ಯಾದೇಶ ಪತ್ರ ನೀಡಲಾಗಿದೆ. ಉಳಿದ16 ರಸ್ತೆಗಳ ಟೆಂಡರ್‌ ಪ್ರಕ್ರಿಯೆಯೂ ಪೂರ್ಣಗೊಂಡಿದೆ.

ಕಾಮಗಾರಿಗೆ ಮುನ್ನ ಗುತ್ತಿಗೆದಾರರಿಂದ ಸೆಕ್ಯೂರಿಟಿ ದಾಖಲೆಗಳನ್ನು ಕೇಳಲಾಗಿದ್ದು, ಇನ್ನೆರಡು ವಾರಗಳಲ್ಲಿ ಇಲ್ಲಿಯೂ ಕಾಮಗಾರಿ ಪ್ರಾರಂಭವಾಗಲಿದೆ’ ಎಂದು ಸ್ಮಾರ್ಟ್‌ಸಿಟಿ ಯೋಜನೆಯ ಮುಖ್ಯ ಎಂಜಿನಿಯರ್‌ ಸುರೇಶ್‌ ಮಾಹಿತಿ ನೀಡಿದರು....

ಫೋಟೋ - http://v.duta.us/5F2eRgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/cSBtLAAA

📲 Get Bangalore City News on Whatsapp 💬