ಪಾರ್ಶ್ವವಾಯುಗೆ ಬೆನ್ನುಮೂಳೆ ಟಿಬಿ ಕಾರಣ

  |   Bangalore-Citynews

ಬೆಂಗಳೂರು: ವಿಶ್ವದ ಜನಸಂಖ್ಯೆಯ ಐದನೇ ಒಂದು ಭಾಗದಷ್ಟು ಕ್ಷಯ (ಟಿಬಿ) ರೋಗಿಗಳು ಭಾರತದಲ್ಲಿದ್ದಾರೆ. ಸುಮಾರು 6 ದಶಲಕ್ಷದಷ್ಟು ಕ್ಷಯ ರೋಗ ಪ್ರಕರಣಗಳು ಇಲ್ಲಿವೆ. ಅದರಲ್ಲಿ ಶೇ. 2 ರಷ್ಟು ಮಂದಿ ಅಸ್ಥಿಪಂಜರ ವ್ಯವಸ್ಥೆಯ ಟಿಬಿಯಿಂದ ಬಳಲುತ್ತಿದ್ದರೆ, ಅರ್ಧಕ್ಕಿಂತ ಹೆಚ್ಚಿನವರು ಬೆನ್ನುಮೂಳೆ ಟಿಬಿಯನ್ನು ಹೊಂದಿದ್ದಾರೆ ಎಂದು ವಿಕ್ರಂ ಆಸ್ಪತ್ರೆಯ ಕನ್ಸಲ್ಟೆಂಟ್‌ ಸ್ಪೈನ್‌ ಸರ್ಜರಿ ಡಾ.ಅಮೃತ್‌ಲಾಲ್‌ ಎ. ಮಸ್ಕರೇನಸ್‌ ತಿಳಿಸಿದ್ದಾರೆ.

ನಗರದ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷಯ ಅನಾದಿಕಾಲದ ರೋಗ. ಅತಿಯಾದ ಜನಸಂಖ್ಯೆ, ಅಪೌಷ್ಟಿಕತೆ, ಅಸ್ವತ್ಛತೆ, ಧೂಮಪಾನ, ಮದ್ಯಪಾನ, ಮಾದಕ ವ್ಯಸನ, ಎಚ್‌ಐವಿ ಸೋಂಕು ಇನ್ನಿತರ ದುಶ್ಚಟಗಳು ಕಾಯಿಲೆ ಹರಡಲು ಕಾರಣವಾದರೆ, ಮಧುಮೇಹ, ರೋಗ ನಿರೋಧಕ ಚಿಕಿತ್ಸೆ ಮತ್ತು ಅನುವಂಶೀಯ ಅನುಮಾನಗಳು ಕೂಡ ಕಾರಣವಾಗುತ್ತವೆ.

ಬೆನ್ನುಹುರಿಯಲ್ಲಿ ಕಿವು ಕಟ್ಟಿಕೊಂಡು ಬೆನ್ನು ಹುರಿಯ ಮೇಲೆ ಒತ್ತಡ ತರುವ ಈ ಟಿಬಿ ನರಮಂಡಲದೊಂದಿಗೂ ಬೆರೆತಿದೆ. ಬೆನ್ನುಹುರಿಯನ್ನು ಒತ್ತುವ ಮೂಲಕ ನರವೈಜ್ಞಾನಿಕ ಸಮಸ್ಯೆಗಳನ್ನು ತರುತ್ತದೆ. ಇದರಿಂದ ಕಾಲಿನ ಪಾರ್ಶ್ವವಾಯು ಅಥವಾ ದೇಹದ ಕೆಳಭಾಗದ‌ಲ್ಲಿ ಗಂಭೀರ ಸ್ವರೂಪದ ಪರಿಣಾಮಗಳು ಉಂಟಾಗುತ್ತವೆ. ಇದನ್ನು “ಪಾಟ್ಸ್‌ ಸ್ಪೈನ್‌’ ಎಂತಲೂ ಕರೆಯುತ್ತಾರೆ....

ಫೋಟೋ - http://v.duta.us/B0o0rAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/YRWd0wAA

📲 Get Bangalore City News on Whatsapp 💬