ಬಿತ್ತನೆಗೆ ಭರವಸೆ ಮೂಡಿಸಿದ ಮಳೆ

  |   Bidarnews

ವೀರಾರೆಡ್ಡಿ ಆರ್‌.ಎಸ್‌.

ಬಸವಕಲ್ಯಾಣ: ಕಾರಹುಣ್ಣೆಮೆ ಕಳೆದರೂ ಮುಂಗಾರು ಮಳೆ ಬಾರದಿರುವುದರಿಂದ ರೈತರು ಆಕಾಶದ ಕಡೆ ನೋಡುವಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ತಾಲೂಕಿನ ವಿವಿಧೆಡೆ ಶುಕ್ರವಾರ ರಾತ್ರಿಯಿಂದ ಬೆಳಗಿನ ಜಾವದ ವರೆಗೆ ಮಳೆ ಸುರಿದಿರುವುದರಿಂದ ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ರಾತ್ರಿ ಸುರಿದ ಮಳೆಯಿಂದ ಹೊಲಗಳಲ್ಲಿ ನೀರು ನಿಂತಿದೆ ಹಾಗೂ ಬಂಡೆಯಂದಿದ್ದ ಮಣ್ಣಿನ ಹೆಂಟೆಗಳು ಕರಗಿ ಭೂಮಿ ಬಿತ್ತಗೆ ಹದವಾಗಿದೆ. ಇದರಿಂದ ರೈತರು ಕೃಷಿ ಚಟುವಟಿಕೆಗೆ ಬೇಕಾದ ಸಾಮಗ್ರಿಗಳನ್ನು ಶನಿವಾರ ಮಾರುಕಟ್ಟೆಯಲ್ಲಿ ಖರೀದಿ ಮಾಡುವುದು ಕಂಡುಬಂತು.

ತಾಲೂಕಿನ ಹೋಬಳಿ ಗ್ರಾಮಗಳಾದ ಮಂಠಾಳ 25 ಎಂಎಂ, ಕೋಹಿನೂರ 17 ಎಂಎಂ, ಮುಡಬಿ 36 ಎಂಎಂ, ರಾಜೇಶ್ವರ 30.2 ಎಂಎಂ, ಹುಲಸೂರು 17 ಎಂಎಂ ಹಾಗೂ ಬಸವಕಲ್ಯಾಣ 24 ಎಂಎಂ ಸೇರಿದಂತೆ ಒಟ್ಟು 24.85 ಎಂಎಂ ಮಳೆ ಸುರಿದೆ.

ರೈತರು ಬಿತ್ತನೆ ಮಾಡುವಷ್ಟು ಮಳೆ ಬಂದಿದೆ. ಆದರೆ ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿದ್ದರಿಂದ ಭೂಮಿ ಬೇಗ ಒಣಗಿ ಹೋಗುತ್ತದೆ. ಹೀಗಾಗಿ ಇನ್ನೊಂದು ಮಳೆ ಬಂದರೆ ಭೂಮಿ ಜಾಸ್ತಿ ದಿನ ನೀರು ಹಿಡಿದಿಟ್ಟುಕೊಳ್ಳುತ್ತದೆ. ಆಗ ಬಿತ್ತನೆ ಮಾಡಿದರೆ ರೈತರಿಗೆ ತುಂಬಾ ಅನುಕೂಲವಾಗುತ್ತದೆ ಎಂಬುದು ರೈತ ರಾಮಲಿಂಗ ಸಾಗಾವೆ ಅವರ ಅಭಿಪ್ರಾಯವಾಗಿದೆ....

ಫೋಟೋ - http://v.duta.us/4ahjzgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/LQziDgAA

📲 Get Bidar News on Whatsapp 💬