ಬಾಲಕಾರ್ಮಿಕ ಪದ್ಧತಿ ನಿವಾರಣೆಗೆ ಪಣ ತೊಡಿ: ನ್ಯಾ| ದಾಕ್ಷಾಯಿಣಿ

  |   Dharwadnews

ಕಲಘಟಗಿ: ಸಂಪಾದನೆಗೋಸ್ಕರ ಬಾಲ್ಯಾವಸ್ಥೆ ಯಲ್ಲಿ ಕೆಲಸಕ್ಕೆ ತೊಡಗಿಸುವುದರಿಂದ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಕ್ಷೀಣಿಸುತ್ತಿದೆ. ಬಾಲಕಾರ್ಮಿಕ ಪದ್ಧತಿಯನ್ನು ಬೇರು ಸಹಿತ ಕಿತ್ತೆಸೆಯಲು ಎಲ್ಲರೂ ಪಣ ತೊಡಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧಿಧೀಶೆ ದಾಕ್ಷಾಯಣಿ ಜಿ.ಕೆ. ಹೇಳಿದರು.

ಪಟ್ಟಣದ ಜನತಾ ಇಂಗ್ಲಿಷ್‌ ಸ್ಕೂಲ್ನಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ, ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿರುವ ಮಕ್ಕಳನ್ನು ಕಂಡು ಸುಮ್ಮನಾಗಿರುವುದರಿಂದ ಈ ಅನಿಷ್ಠ ಪದ್ಧತಿ ತೊಲಗುವುದಿಲ್ಲ. ಇಂತಹ ಅವಸ್ಥೆಯನ್ನು ಹುಡುಕಿ ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿದಾಗ ಬಾಲ ಕಾರ್ಮಿಕರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ತರನುಮ ಬಂಗಾಲಿ ಮಾತನಾಡಿ, 14ರಿಂದ 16 ವಯಸ್ಸಿನ ಒಳಗಿನ ಮಕ್ಕಳು ಅಪಾಯಕಾರಿಯಲ್ಲದ ಕೆಲಸದಲ್ಲಿ ತೊಡಗಿಕೊಳ್ಳಬಹುದು. ಆದರೆ ಮಾಲೀಕರು ಅವರಿಂದ ಕೇವಲ 5 ತಾಸು ಮಾತ್ರ ಕೆಲಸ ಮಾಡಿಸಿಕೊಳ್ಳಬೇಕು ಹಾಗೂ ಮಧ್ಯಂತರದಲ್ಲಿ ಒಂದು ತಾಸು ವಿರಾಮ ನೀಡಬೇಕು. ಇದರ ಜೊತೆಗೆ ಪ್ರತಿಯೊಂದು ಅಂಗಡಿಯಲ್ಲಿ ಒಂದು ಪುಸ್ತಕವನ್ನು ಬಿಡುವಿನ ಸಮಯದಲ್ಲಿ ಓದಲು ಇಡುವುದು ಕಡ್ಡಾಯ ಎಂದು ತಿಳಿಸಿದರು....

ಫೋಟೋ - http://v.duta.us/Jf48QgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/hpdH6QAA

📲 Get Dharwad News on Whatsapp 💬