ಬೆಳೆ ವಿಮೆ ಯೋಜನೆ ಅನುಷ್ಠಾನಕ್ಕೆ ಸರ್ವ ಸಹಕಾರ

  |   Dakshina-Kannadanews

ಮಂಗಳೂರು: ಬೆಳೆ ವಿಮೆ ಯೋಜನೆಗಳನ್ನು ಕೃಷಿಕರ ಅನುಕೂಲ ಕ್ಕಾಗಿಯೇ ಸರಕಾರ ಜಾರಿಗೊಳಿಸಿದ್ದು, ಕೃಷಿಕರು ಅಧಿಕ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಂಡು ಪ್ರಯೋಜನ ಪಡೆದುಕೊಳ್ಳಬೇಕು; ಬೆಳೆ ವಿಮೆ ಯೋಜನೆಗಳ ಅನುಷ್ಠಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಸರ್ವ ಪ್ರಯತ್ನ ಮತ್ತು ಸಹಕಾರವನ್ನು ನೀಡ ಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು.

ಪ್ರಧಾನ ಮಂತ್ರಿ ಫಸಲ್‌ ವಿಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಅನುಷ್ಠಾನ ಕುರಿತಂತೆ ಎಸ್‌ಸಿಡಿಸಿಸಿ ಬ್ಯಾಂಕಿನ ಆಶ್ರಯದಲ್ಲಿ ಶನಿವಾರ ಕೊಡಿಯಾಲಬೈಲಿನಲ್ಲಿರುವ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಅವಿಭಜಿತ ದ.ಕ. ಜಿಲ್ಲೆಯ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೈತರು ಜೂ. 30ರ ಒಳಗೆ ಬ್ಯಾಂಕ್‌ ಅಥವಾ ಸಹಕಾರಿ ಸಂಘಗಳ ಮೂಲಕ ನೋಂದಣಿ ಮಾಡಿಸಬೇಕು. ಹೆಚ್ಚು ರೈತ ಸದಸ್ಯರನ್ನು ನೋಂದಾಯಿಸುವ ಸಹಕಾರಿ ಸಂಘಕ್ಕೆ ಬಹುಮಾನ ನೀಡ ಲಾಗುವುದು. ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳ ಮೂಲಕ ಸಾಲ ಪಡೆದ ಸುಮಾರು 80,000 ರೈತರಿದ್ದಾರೆ. ಎಲ್ಲರೂವಿಮೆ ಮಾಡಿಸಬೇಕು ಎಂದರು....

ಫೋಟೋ - http://v.duta.us/a1VxDgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/sjT-3QAA

📲 Get Dakshina Kannada News on Whatsapp 💬