ಬೇವುಕಲ್ಲು ಗ್ರಾಪಂ: ಬತ್ತಿದ 700 ಕೊಳವೆ ಬಾವಿ

  |   Mandyanews

ಮಂಡ್ಯ: ತಾಲೂಕಿನ ಬೇವು ಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 700ಕ್ಕೂ ಹೆಚ್ಚು ಕೊಳವೆಬಾವಿಗಳು ನೀರಿಲ್ಲದೆ ಬತ್ತಿಹೋಗಿವೆ. ಸಾವಿರ ಅಡಿ ಆಳಕ್ಕೆ ಕೊಳವೆ ಬಾವಿ ಕೊರೆದರೂ ಹನಿ ನೀರು ಸಿಗುತ್ತಿಲ್ಲ. ಒಮ್ಮೆ ಸಿಕ್ಕರೂ ನೀರು ಕೆಲವೇ ದಿನಗಳಲ್ಲಿ ಬರಿದಾಗುತ್ತಿದೆ. ಹೀಗಾಗಿ ಈ ಭಾಗದ ರೈತರು ನೀರಿನ ಅಭಾವದಿಂದ ಕೃಷಿ ಚಟುವಟಿಕೆ ನಡೆಸಲಾಗದೆ ದಿಕ್ಕೆಟ್ಟಿದ್ದಾರೆ.

ಸಾಲ ಮಾಡಿ ಬೆಳೆದಿರುವ ಕಬ್ಬು, ಬಾಳೆ, ತೆಂಗು ಬೆಳೆಗಳು ನೀರಿಲ್ಲದೆ ಕಣ್ಣೆದುರೇ ಒಣಗುತ್ತಿವೆ. ಬೆಳೆ ಬೆಳೆಯಲು ಮಾಡಿದ ಸಾಲದ ಹೊರೆ ಹೆಚ್ಚಾಗುತ್ತಿದೆ. 700ರಿಂದ 1000 ಅಡಿವರೆಗೆ ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಮಾತ್ರ ಸಿಗುತ್ತಿಲ್ಲ. ಜಮೀನಿನಲ್ಲಿರುವ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗದೆ ರೈತರು ಪರದಾಡುತ್ತಿದ್ದಾರೆ.

ನೀರಿಗಾಗಿ ಹೋರಾಟ: ಬೇವುಕಲ್ಲು ಗ್ರಾಮ ಪಂಚಾಯಿತಿಗೆ ಬೇವುಕಲ್ಲು, ಬೇವುಕಲ್ಲು ಕೊಪ್ಪಲು, ಬಿ.ಹೊನ್ನೇನಹಳ್ಳಿ, ಬಿ.ಹಟ್ನ, ಹೊನ್ನೇನಹಳ್ಳಿ, ಜವನಹಳ್ಳಿ, ಬಿಲ್ಲೇನಹಳ್ಳಿ, ಕೊಂತೆಗೌಡನಕೊಪ್ಪಲು, ಗಿಡ್ಡೇಗೌಡನ ಕೊಪ್ಪಲು, ಮಲ್ಲೇನಹಳ್ಳಿ, ಬಂಕನಹಳ್ಳಿ, ಛತ್ರನಹಳ್ಳಿ ಗ್ರಾಮಗಳು ಸೇರಲಿದ್ದು, ಎಲ್ಲಾ ಗ್ರಾಮಗಳಲ್ಲಿಯೂ ನೀರಿಗೆ ತೀವ್ರ ಬವಣೆ ಎದುರಿಸುತ್ತಿದ್ದಾರೆ. ಲಕ್ಷಾಂತರ ರೂ. ಹಣ ಖರ್ಚು ಮಾಡಿ ಪಾತಾಳದಲ್ಲಿರುವ ಗಂಗೆಯನ್ನು ಹೊರತೆಗೆಯಲು ಗ್ರಾಮಸ್ಥರು ಭಗೀರಥ ಪ್ರಯತ್ನ ನಡೆಸುತ್ತಿದ್ದಾರೆ. ಒಂದು ಕೊಳವೆಬಾವಿ ಕೊರೆದು ನೀರು ಸಿಗದೆ ವೈಫ‌ಲ್ಯವಾದರೂ ಮರಳಿ ಯತ್ನವ ಮಾಡು ಎಂಬಂತೆ ಮತ್ತೂಂದು, ಮಗದೊಂದು ಕೊಳವೆ ಬಾವಿಯನ್ನು ಕೊರೆಸುತ್ತಾ ಜಮೀನಿಗೆ ನೀರಿನ ಆಧಾರ ಮಾಡಿಕೊಳ್ಳುವುದಕ್ಕೆ ಹೋರಾಟ ನಡೆಸುತ್ತಿದ್ದಾರೆ. ಆದರೂ ಜೀವ ಜಲ ರೈತರ ಪಾಲಿಗೆ ಸಿಗದಂತಾಗಿದೆ....

ಫೋಟೋ - http://v.duta.us/hpNLiQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/7vC1fgAA

📲 Get Mandya News on Whatsapp 💬