ಭತ್ತಿದ ತುಂಗಭದ್ರೆ; ಭತ್ತ ನಾಟಿಗೆ ಹಿನ್ನಡೆ

  |   Bellarynews

ಕಂಪ್ಲಿ: ಮುಂಗಾರು ಮಳೆ ಆರಂಭವಾದರೂ ಸಹಿತ ಇದುವರೆಗೂ ಒಂದೇ ಒಂದು ಮಳೆಯೂ ಬಂದಿಲ್ಲ. ತಾಲೂಕಿನ ರೈತರ ಜೀವನಾಡಿ ತುಂಗಭದ್ರಾ ನದಿಯ ಒಡಲು ಬರಿದಾಗಿದ್ದು, ನದಿಯಲ್ಲಿ ನೀರಿಲ್ಲದೇ ಇರುವುದರಿಂದ ಅಂತರ್ಜಲ ಮಟ್ಟ ಕುಸಿದಿದ್ದು, ನದಿ ಪಾತ್ರದ ಸುಮಾರು 3.291 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ನಾಟಿಗೆ ತೀವ್ರ ಹಿನ್ನಡೆಯಾಗಿದ್ದು, ಅನ್ನದಾತರು ಆತಂಕಗೊಂಡಿದ್ದಾರೆ.

ನದಿ ಪಾತ್ರದ ವ್ಯಾಪ್ತಿಯಲ್ಲಿರುವ ಕಂಪ್ಲಿ, ಕಂಪ್ಲಿ-ಕೋಟೆ ಮಾಗಾಣಿ ಪ್ರದೇಶ, ರಾಮಸಾಗರ, ಸಣಾಪುರ, ಇಟಗಿ, ಬೆಳಗೋಡುಹಾಳು ಭಾಗದಲ್ಲಿ ಮುಂಗಾರು ಕೃಷಿ ಚಟುವಟಿಕೆಗೆ ಮಂಕು ಕವಿತದಂತಾಗಿದೆ. ನದಿ ಭಾಗದ ಅಲ್ಲಲ್ಲಿ ಸಣ್ಣ ಪುಟ್ಟ ಕೊಳಗಳಿದ್ದು, ಅಲ್ಲಿಂದ ಪೈಪ್‌ಲೈನ್‌ ಅಳವಡಿಸಿಕೊಂಡು ಹರಸಾಹಸ ಮಾಡಿ ನೀರು ಹಾಯಿಸಿಕೊಳ್ಳುವ ಮೂಲಕ ಕೆಲವು ರೈತರು ಭತ್ತ ನಾಟಿ ಮಾಡುತ್ತಿದ್ದಾರೆ. ಆದರೆ ಕೊಳಗಳಲ್ಲಿ ನೀರು ಸಂಗ್ರಹ ಕುಸಿದಲ್ಲಿ ನಾಟಿ ಮಾಡಿದ ಭತ್ತವೂ ನೀರಿಲ್ಲದೆ ಒಣಗುವ ಸಾಧ್ಯತೆಯೂ ಇದೆ. ವಿಶೇಷವಾಗಿ ನದಿ ಪಾತ್ರದ ಜನ ಜಾನುವಾರುಗಳಿಗೆ ಜಲಚರಗಳಿಗೆ ಕುಡಿಯುವ ನೀರಿಗೂ ತತ್ವಾರ ಬಂದೊದಗಿದೆ. ತುಂಗಭದ್ರಾ ಜಲಾಶಯವನ್ನು ನೆಚ್ಚಿಕೊಂಡಿರುವ ತುಂಗಭದ್ರಾ ಬಲದಂಡೆ ಮೇಲ್ಮಟ್ಟ ಮತ್ತು ಕೆಳಮಟ್ಟದ ಕಾಲುವೆ, ರಾಮಸಾಗರದ ವಿಠಲಾಪುರ ಮತ್ತು ಗೌರಮ್ಮ ಕೆರೆ ವ್ಯಾಪ್ತಿಯ ರೈತರು ಇಲ್ಲಿಯವರೆಗೂ ಜಮೀನಿನಲ್ಲಿ ಪ್ರಾಥಮಿಕ ಅಂದರೆ ಮಾಗಿ ಉಳುಮೆಯನ್ನಾಗಲಿ, ಭೂಮಿ ಹದಗೊಳಿಸುವ ಕಾರ್ಯವನ್ನು ಸೇರಿದಂತೆ ಕೃಷಿ ಚಟುವಟಿಕೆಯನ್ನೇ ಆರಂಭಿಸಿಲ್ಲ....

ಫೋಟೋ - http://v.duta.us/VEHiDgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/624IJwAA

📲 Get Bellary News on Whatsapp 💬