ಮೆಣಸಿನಕಾಯಿ ಸುರಕ್ಷತೆಗೆ ವಾಕ್ಯೂಮ್‌ ಪ್ಯಾಕಿಂಗ್‌

  |   Haverinews

ಬ್ಯಾಡಗಿ: ಮೆಣಸಿನಕಾಯಿ ಕೆಡದಂತೆ ವಾಕ್ಯೂಮ್‌ ಪ್ಯಾಕಿಂಗ್‌ ಪದ್ಧತಿ ಅನುಷ್ಠಾನ ಜಾರಿಗೊಳಿಸುವುದು ಸೇರಿದಂತೆ ಬ್ಯಾಡಗಿ ಮೂಲತಳಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಪ್ರತ್ಯೇಕ ಚಿಲ್ಲಿ ಬೋರ್ಡ್‌ ಸ್ಥಾಪನೆಗೆ ಒತ್ತು ನೀಡಲಾಗುವುದು. ಈ ಮೂಲಕ ರೈತ ಸಮುದಾಯ ಹಾಗೂ ಯುವ ವರ್ತಕರಿಗೆ ಅನುಕೂಲ ಕಲ್ಪಿಸುವುದಾಗಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಸುಬ್ರಮಣ್ಯ ಭರವಸೆ ನೀಡಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ 160 ರೂ. ಕೋಟಿ ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಿರುವ ವಾಕ್ಯೂಮ್‌ ಪ್ಯಾಕಿಂಗ್‌ ಪದ್ಧತಿ ಅನುಷ್ಠಾನದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಬ್ಯಾಡಗಿ ಮಾರುಕಟ್ಟೆ ಏಷ್ಯಾ ಖಂಡದಲ್ಲೇ ಮೆಣಸಿನಕಾಯಿ ವ್ಯಾಪಾರಕ್ಕೆ ಪ್ರಸಿದ್ಧಿ ಪಡೆದಿದೆ. ಈಗಾಗಲೇ ಸಾಕಷ್ಟು ಹೈಬ್ರೀಡ್‌ ತಳಿಗಳನ್ನು ಪರಿಚಯಿಸಲಾಗಿದೆ. ಆದರೆ, ಇಲ್ಲಿನ ತಳಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಆಗದಿರುವುದು ದುರದೃಷ್ಟಕರ ಸಂಗತಿ ನೈಸರ್ಗಿಕ ಬಣ್ಣ ಹೊಂದಿರುವ ಬ್ಯಾಡಗಿ ಉಳಿಸಿಕೊಳ್ಳದಿದ್ದರೇ ಮಾರುಕಟ್ಟೆ ಭವಿಷ್ಯಕ್ಕೂ ಪೆಟ್ಟು ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನೂತನ ತಂತ್ರಜ್ಞಾನ ಅಳವಡಿಕೆ ಮಾಡುವುದರಿಂದ ಮಾರುಕಟ್ಟೆಯನ್ನು ಅತ್ಯಂತ ವೇಗವಾಗಿ ಬೆಳೆಸಬಹುದಾಗಿದೆ. ಮಾರುಕಟ್ಟೆ ಅಭಿವೃದ್ಧಿಗೆ ಅವಶ್ಯವಿರುವ ವಾಕ್ಯೂಮ್‌ ಪ್ಯಾಕಿಂಗ್‌ನಿಂದ ಸುಮಾರು 10 ವರ್ಷ ಅದನ್ನು ಸಂಗ್ರಹಿಸಿಡಬಹುದಾಗಿದೆ. ಕೋಟಿಗಟ್ಟಲೇ ಹಣ ವ್ಯಯಿಸಿ ಕೋಲ್ಡ್ ಸ್ಟೋರೆಜ್‌ ನಿರ್ಮಿಸುವುದಕ್ಕಿಂತ ಹೆಚ್ಚು ಲಾಭ ರೈತನಿಗಾಗಲಿದೆ. ಹೀಗಾಗಿ ಮಾರುಕಟ್ಟೆ ಆವರಣಲ್ಲಿಯೇ ರೈತರ ಅನುಕೂಲಕ್ಕಾಗಿ ವಾಕ್ಯೂಮ್‌ ಪ್ಯಾಕಿಂಗ್‌ ಪದ್ಧತಿ ಅಳವಡಿಸುತ್ತಿರುವುದಾಗಿ ತಿಳಿಸಿದರು....

ಫೋಟೋ - http://v.duta.us/jk3bugAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/AP926gAA

📲 Get Haveri News on Whatsapp 💬