ಮೈತ್ರಿ ನಂಬಿ ಕೆಟ್ಟೆವು, ಸಿದ್ದು ವಿರುದ್ಧ ಕಿಡಿ

  |   Chikkaballapuranews

ಚಿಕ್ಕಬಳ್ಳಾಪುರ: ಮೈತ್ರಿ ನಂಬಿ ನಾವೆಲ್ಲಾ ಕೆಟ್ಟು ಹೋದೆವು. ಯಾವ ಕ್ಷೇತ್ರದಲ್ಲೂ ಮೈತ್ರಿ ಕೆಲಸ ಮಾಡಲಿಲ್ಲ. ಈ ಮೈತ್ರಿ ಸರ್ಕಾರದ ಬಗ್ಗೆಯೇ ರಾಜ್ಯದ ಮತದಾರರಲ್ಲಿಯೇ ಒಳ್ಳೆಯ ಅಭಿಪ್ರಾಯವಿಲ್ಲ. ಆ ಕಾರಣಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ.ವೀರಪ್ಪ ಮೊಯ್ಲಿ ಹೇಳಿದರು.

ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಚದಲುಪುರದಲ್ಲಿರುವ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರ ಹಂಚಿಕೆ, ನೇಮಕಾತಿಗಳಲ್ಲಿ ನಾಯಕರ ಮೇಲುಗೈ ಸಾಧಿಸಿದರೆ ಸಾಲದು, ಕಾರ್ಯಕರ್ತರು ಮೇಲುಗೈ ಸಾಧಿಸಬೇಕೆಂದು ಹೇಳಿದರು.

ಮೈತ್ರಿಯಿಂದ ನಮಗೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ಸಿಗಲಿಲ್ಲ. ಕೆಲವೊಂದು ಕಡೆ ನಮ್ಮ ಪಕ್ಷದ ನಾಯಕರು, ಮುಖಂಡರು ಕೂಡ ಕೆಲಸ ಮಾಡಲಿಲ್ಲ ಎಂದು ತಮ್ಮ ಸೋಲಿನ ಬಗ್ಗೆ ಪರಾಮರ್ಶೆ ನಡೆಸಿದರು.

ಅಭಿವೃದ್ಧಿ ಪರ ಇರಲಿ: ಕಾಂಗ್ರೆಸ್‌ ಪಕ್ಷ ಎಂದೂ ಕೂಡ ಅಧಿಕಾರ ಕೇಂದ್ರೀಕೃತ ಅಥವಾ ಮಂತ್ರಿಮಂಡಲ ಕೇಂದ್ರೀಕೃತ ಪಕ್ಷವಾಗಬಾರದು. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ. ಸರ್ಕಾರವನ್ನು ಉಳಿಸುವ ಕೆಲಸ ಆಗಬಾರದು. ಸಂಪುಟ ಉಳಿಸಿಕೊಳ್ಳುವ ಕೆಲಸ ಮಾಡುವುದರ ಜೊತೆಗೆ ಜನರ ಅಭಿವೃದ್ಧಿ ಪರವಾಗಿ ಇರಬೇಕೆಂದರು....

ಫೋಟೋ - http://v.duta.us/Wm6o8AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/RMwFRQAA

📲 Get Chikkaballapura News on Whatsapp 💬