ಮಿತ್ರ ಪಕ್ಷಕ್ಕೆ ಮತ್ತೆ ಎಚ್ಚರಿಕೆ ನೀಡಿದ ಗೌಡರು

  |   Karnatakanews

ಬೆಂಗಳೂರು: ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸೇರಿ ಎರಡೂ ಪಕ್ಷಗಳು ಹೊಂದಿಕೊಂಡು ಹೋದರೆ ನಾಲ್ಕು ವರ್ಷದ ಬಳಿಕ ಚುನಾವಣೆ ನಡೆಯುತ್ತದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ. ಆ ಮೂಲಕ ಮಿತ್ರ ಪಕ್ಷ ಕಾಂಗ್ರೆಸ್‌ಗೆ ಮತ್ತೆ ಎಚ್ಚರಿಕೆ ನೀಡಿರುವ ದೇವೇಗೌಡರು, ಹೊಂದಾಣಿಕೆಯಾಗದಿದ್ದರೆ ಕಷ್ಟವಾಗಬಹುದು ಎಂಬ ಸಂದೇಶ ರವಾನಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಮಹಿಳಾ ಘಟಕದ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗಳು ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಮುಂದುವರಿದರೆ ಮಾತ್ರ ಸರ್ಕಾರ ಉಳಿದ ನಾಲ್ಕು ವರ್ಷ ಅಧಿಕಾರ ಪೂರ್ಣಗೊಳಿಸಲಿದೆ ಎಂದರು.

“ಕುಮಾರಸ್ವಾಮಿ ಸರ್ಕಾರ ನಡೆಸುತ್ತಾರೆ, ನಾನು ಪಕ್ಷ ಸಂಘಟನೆ ಮಾಡುತ್ತೇನೆ. ನಾಲ್ಕು ವರ್ಷದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುತ್ತೇನೆ. ನಾನು ಅನೇಕ ಏಳು-ಬೀಳು ನೋಡಿದ್ದು, ಕುಗ್ಗೊದಿಲ್ಲ’ ಎಂದು ಹೇಳಿದರು.

ಶೀಘ್ರವೇ ಮಹಿಳಾ ಸಮಾವೇಶ: ಇದಕ್ಕೂ ಮುನ್ನ ಮಹಿಳಾ ಘಟಕದ ಸಭೆಯಲ್ಲಿ ಮಹಿಳಾ ಘಟಕಕ್ಕೆ ನೂತನ ಅಧ್ಯಕ್ಷರ ನೇಮಕ ಕುರಿತು ಚರ್ಚಿಸಿ, ಶೀಘ್ರದಲ್ಲೇ ಮಹಿಳಾ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ಅಂದೇ ನೂತನ ಅಧ್ಯಕ್ಷರ ಘೋಷಣೆಯನ್ನೂ ಮಾಡಲು ತೀರ್ಮಾನಿಸಲಾಯಿತು....

ಫೋಟೋ - http://v.duta.us/Ul8eUAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/pUs0FAAA

📲 Get Karnatakanews on Whatsapp 💬