ಮದ್ಯದ ಅಮಲಿನಲ್ಲಿ ಮಹಡಿಯಿಂದ ಬಿದ್ದು, ಇಬ್ಬರು ದುರ್ಮರಣ

  |   Bangalore-Citynews

ಬೆಂಗಳೂರು: ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಚರ್ಚ್‌ಸ್ಟ್ರೀಟ್‌ನಲ್ಲಿ ರಾತ್ರಿ ಗಸ್ತಿನಲ್ಲಿರುವಾಗಲೇ ಮದ್ಯದ ಅಮಲಿನಲ್ಲಿ ಮಹಿಳಾ ಸಾಫ್ಟ್ವೇರ್‌ ಎಂಜಿನಿಯರ್‌ ಹಾಗೂ ಆಕೆಯ ಸ್ನೇಹಿತ ಪಬ್‌ವೊಂದರ ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಸಂಜಯ್‌ನಗರದ ಆರ್‌ಎಂವಿ ಎಕ್ಸ್‌ಟೆನ್ಷನ್‌ ನಿವಾಸಿ ಪವನ್‌ ಅತ್ತಾವರ್‌(36) ಮತ್ತು ಆರ್‌.ಟಿ.ನಗರದ ಗಂಗಾನಗರ ನಿವಾಸಿ ವೇದಾ ಯಾದವ್‌(31)ಮೃತರು.

ಶುಕ್ರವಾರ ರಾತ್ರಿ 11.30ರ ಸುಮಾರಿಗೆ ದುರ್ಘ‌ಟನೆ ನಡೆದಿದ್ದು, ಈ ಸಂಬಂಧ ಪಬ್‌ನ ಮಾಲೀಕ ಚಂದನ್‌, ಕಟ್ಟಡ ಮಾಲೀಕ ಸುಧೀರ್‌ ಶೆಟ್ಟಿ ಹಾಗೂ ಇತರರ ವಿರುದ್ಧ ಕಬ್ಬನ್‌ಪಾರ್ಕ್‌ ಠಾಣೆಯಲ್ಲಿ ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಾಗಿದೆ. ಶನಿವಾರ ಅಪರಾಹ್ನ ಬೌರಿಂಗ್‌ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಶಿವಮೊಗ್ಗ ಮೂಲದ ನಿವೃತ್ತ ಮುಖ್ಯ ಎಂಜಿನಿಯರ್‌ವೊಬ್ಬರ ಪುತ್ರ ಪವನ್‌ ಅತ್ತಾವರ್‌ಗೆ ಮದುವೆಯಾಗಿದ್ದು, ಪತ್ನಿಯಿಂದ ವಿಚ್ಛೇಧನ ಕೋರಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮಹಿಳಾ ಸಾಫ್ಟ್ವೇರ್‌ ಎಂಜಿನಿಯರ್‌ ವೇದಾ ಯಾದವ್‌ ಸಹ ಪತಿಯಿಂದ ದೂರವಾಗಿದ್ದು, ಐದು ವರ್ಷದ ಮಗಳ ಜತೆ ಗಂಗಾನಗರದಲ್ಲಿ ವಾಸವಾಗಿದ್ದಾರೆ.

ಕೆಲ ತಿಂಗಳಿಂದ ಇಬ್ಬರ ನಡುವೆ ಪರಿಚಯವಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಚರ್ಚ್‌ಸ್ಟ್ರೀಟ್‌ನಲ್ಲಿರುವ ಮೂರು ಅಂತಸ್ತಿನ ಕಟ್ಟಡದ ಎರಡನೇ ಮಹಡಿಯಲ್ಲಿರುವ ಹ್ಯಾಶ್‌ ಬಿಯರ್‌ ಪಬ್‌ಗ ಪವನ್‌ ತಮ್ಮ ಸ್ನೇಹಿತೆ ವೇದಾ ಯಾದವ್‌, ಸ್ನೇಹಿತ ದೀಪಕ್‌ ರಾವ್‌ ಜತೆ ಹೋಗಿದ್ದಾರೆ ಎಂದು ಪೊಲೀಸರು ಹೇಳಿದರು....

ಫೋಟೋ - http://v.duta.us/GX4l2AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/wO-6pwAA

📲 Get Bangalore City News on Whatsapp 💬