ಮಾರ್ಗ ನಿರ್ಧಾರಕ್ಕೆ ಸಮನ್ವಯ ಸಮಿತಿ ಅಗತ್ಯ

  |   Davanagerenews

ಜಗಳೂರು: ಸಮಗ್ರ ನೀರಾವರಿ ಜಾರಿಗಾಗಿ ಹಮ್ಮಿಕೊಂಡಿರುವ ಹೋರಾಟಕ್ಕೆ ನಮ್ಮ ಬೆಂಬಲವಿದ್ದು, ಜಗಳೂರು ಶಾಖಾ ಕಾಲುವೆ ನಿರ್ಮಾಣಕ್ಕೆ ಸೂಕ್ತ ಮಾರ್ಗ ಯಾವುದೆಂದು ಚರ್ಚಿಸಲು ಸಮನ್ವಯ ಸಮಿತಿ ರಚಿಸುವ ಅಗತ್ಯವಿದೆ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್‌ ಹೇಳಿದರು.

ಪಟ್ಟಣದ ತಾಲೂಕು ಕಛೇರಿ ಮುಂಭಾಗದಲ್ಲಿ ಭದ್ರಾ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ 7 ನೇ ದಿನದ ಮುಷ್ಕರ ನಿರತರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಕಾಲುವೆ ಮಾರ್ಗ ನಿರ್ಮಾಣಕ್ಕೆ ನೀರಾವರಿ ನಿಗಮದ ಅಧಿಕಾರಿ ದೇಸಾಯಿ ಅವರನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ಸ್ಪಷ್ಟವಾದ ನಿರ್ಧಾರ ತಿಳಿಸುವುದು ತಡವಾಯಿತು. ಅದೇ ವೇಳೆ ಚುನಾವಣೆ ಬಂದ ಕಾರಣ ಮತ್ತೆ ಸಮಿತಿ ಸಭೆ ಸೇರುವುದು ಸಾಧ್ಯವಾಗಲಿಲ್ಲ ಎಂದರು.

ನನೆಗುದಿಗೆ ಬಿದ್ದ ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪ್ರಾರಂಭಿಸಲು ತಾಂತ್ರಿಕ ಹಾಗೂ ಆರ್ಥಿಕ ಅನುಮೊದನೆಗಳು ಬೇಕಾಗಿದೆ. ಇದಕ್ಕೂ ಮುನ್ನ ಜಗಳೂರು ತಾಲೂಕಿಗೆ ಯಾವ ಮಾರ್ಗದಿಂದ ನೀರು ಬಂದರೆ ಸೂಕ್ತ ಎನ್ನುವುದು ಚರ್ಚೆಯಾಗಬೇಕಿದೆ. ಮಾರ್ಗ ನಿರ್ಧಾರಕ್ಕಾಗಿ ನೀರಾವರಿ ನಿಗಮದ ಅಧಿಕಾರಿಗಳು, ಹೋರಾಟ ಸಮಿತಿ, ಸ್ಥಳೀಯ ಜನಪ್ರತಿನಿಧಿಗಳು ಸೇರಿ ಒಂದು ನಿರ್ಧಾರಕ್ಕೆ ಬರಬೇಕಾಗಿದೆ ಎಂದರು....

ಫೋಟೋ - http://v.duta.us/SUTStgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/OacwaQAA

📲 Get Davanagere News on Whatsapp 💬