ಮರಳಿ ಗೂಡು ಸೇರಿದ ಅರಳಗೋಡಿನ ಜನ

  |   Shimoganews

ಮಾ.ವೆಂ.ಸ. ಪ್ರಸಾದ್‌

ಸಾಗರ: ಮಾರಣಾಂತಿಕ ಮಂಗನಕಾಯಿಲೆಯಿಂದ ಹೈರಾಣಾಗಿ ಊರು ತೊರೆದ ತಾಲೂಕಿನ ಅರಳಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಜನ ನಿಧಾನವಾಗಿ ಊರಿನತ್ತ ಮರಳುತ್ತಿದ್ದಾರೆ.

ಕಳೆದ ನವೆಂಬರ್‌ನಿಂದ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಜನರನ್ನು ಪ್ರಾಣಭೀತಿಗೆ ತಳ್ಳಿದ್ದ ಮಂಗನ ಕಾಯಿಲೆಯ ಆತಂಕ ಮಳೆಗಾಲ ಆರಂಭಗೊಂಡಿದ್ದರಿಂದ ಕೆಲ ಮಟ್ಟಿಗೆ ಕಡಿಮೆಯಾಗಿದ್ದು ಮನೆಗೆ ಬೀಗ ಹಾಕಿ ಸಾಗರ ನಗರ ಸೇರಿದಂತೆ ವಿವಿಧೆಡೆಗಳಿಗೆ ವಲಸೆ ಹೋದವರು ಕಳೆದ ಒಂದು ವಾರದಿಂದ ವಾಪಸ್‌ ತಮ್ಮ ಮನೆಯತ್ತ ಮುಖ ಮಾಡುತ್ತಿದ್ದಾರೆ.

ತಗ್ಗಿದ ಜ್ವರಬಾಧೆ: ಅಂದಾಜು 20 ಮಂದಿಯನ್ನು ಬಲಿ ತೆಗೆದುಕೊಂಡ ಮಂಗನಕಾಯಿಲೆ ಕಳೆದ ಒಂದು ತಿಂಗಳಿನಿಂದ ಈ ಭಾಗದಲ್ಲಿ ಕಾಣಿಸಿಕೊಂಡಿಲ್ಲ. ಯಾವುದೇ ಶಂಕಿತ ಮಂಗನ ಕಾಯಿಲೆ ಜ್ವರದ ಪ್ರಕರಣವೂ ವರದಿಯಾಗಿಲ್ಲ. ಸದ್ಯ ಮಣಿಪಾಲ್ನಲ್ಲಿ ತುಮರಿಯ ನಿಶಾಂತ್‌ ಎಂಬುವವರು ಕೆಎಫ್‌ಡಿ ಪಾಸಿಟಿವ್‌ ಕಂಡುಬಂದ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಬಿಟ್ಟರೆ ಅರಳಗೋಡು ಭಾಗದವರಾರೂ ಆಸ್ಪತ್ರೆಯಲ್ಲಿಲ್ಲ. ಪ್ರಸ್ತುತ ನಿಶಾಂತ್‌ ಕೂಡ ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ತೋಟಕ್ಕಿಳಿದ ಕೃಷಿಕರು-ಕಾರ್ಮಿಕರು: ಕೆಎಫ್‌ಡಿ ಆತಂಕ ತಗ್ಗಿದ್ದರಿಂದ ಇಲ್ಲಿನ ಅಲಗೋಡು, ಸಂಪ, ಮಂಡವಳ್ಳಿ, ಐತುಮನೆಯ ಹಲವು ಗ್ರಾಮಸ್ಥರು ತಮ್ಮ ಮನೆಗಳಿಗೆ ಮರಳಿದ್ದಾರೆ. ಕೆಎಫ್‌ಡಿಯಿಂದ ಸಾವು ನೋವಿನ ಪ್ರಕರಣ ಕಾಣಿಸಿಕೊಳ್ಳದ ನಂದೋಡಿ, ಆರೋಡಿ, ಮಂಡವಳ್ಳಿ ಮೊದಲಾದ ಭಾಗಗಳಲ್ಲಿ ವಾರದಿಂದೀಚೆಗೆ ತೋಟಕ್ಕೆ ಇಳಿದು ಕೃಷಿಕರು, ಕಾರ್ಮಿಕರು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಭಾಗದಲ್ಲಿ ಮಳೆ ಕೂಡ ಕಳೆದ ಎರಡು ದಿನಗಳಿಂದ ಸಾಕಷ್ಟು ಪ್ರಮಾಣದಲ್ಲಿ ಸುರಿಯುತ್ತಿದೆ. ಹೀಗಾಗಿ ಹಲವು ತಿಂಗಳಿನಿಂದ ಕೆಲಸವಿಲ್ಲದೆ ಪರದಾಡುತ್ತಿದ್ದ ಕೃಷಿ ಕಾರ್ಮಿಕರು ಕೂಡ ತೋಟಕ್ಕೆ ಇಳಿದಿದ್ದಾರೆ....

ಫೋಟೋ - http://v.duta.us/NPw4fAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/-ZvcBwAA

📲 Get Shimoga News on Whatsapp 💬