ಮೂಲಸೌಕರ್ಯ ಪೂರಕ ಕ್ರಿಯಾಯೋಜನೆ ತಯಾರಿಸಲು ಸೂಚನೆ

  |   Gadagnews

ಶಿರಹಟ್ಟಿ: ಹಸಿರು ನ್ಯಾಯಾಧಿಕರಣದ ನಿರ್ದೇಶನದಂತೆ ಪಪಂ ವ್ಯಾಪ್ತಿಯಲ್ಲಿನ ವಿವಿಧ ವಾರ್ಡ್‌ಗಳಲ್ಲಿ ಮೂಲ ಸೌಕರ್ಯಕ್ಕೆ ಪೂರಕವಾದಂತಹ ಕ್ರಿಯಾಯೋಜನೆ ತಯಾರಿಸಿ ತಮಗೆ ನೀಡಬೇಕೆಂದು ಪಪಂ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಹೇಳಿದರು.

ಪಪಂ ಕಾರ್ಯಾಲಯದಲ್ಲಿ ಹಸಿರು ನ್ಯಾಯಾಧಿಕರಣದ ನಿರ್ದೇಶನದ ಮೇರೆಗೆ ವಾರ್ಡ್‌ಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ಅವರು ಮಾತನಾಡಿದರು. ವಾರ್ಡ್‌ಗಳ ಅಭಿವೃದ್ಧಿಗೆ ಅನುದಾನ ಸಾಕಾಗುತ್ತಿಲ್ಲ ಎಂಬುದರ ಬಗ್ಗೆ ಹಸಿರು ನ್ಯಾಯಾಲಯಕ್ಕೆ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು. ಇದನ್ನು ಪರಿಗಣಿಸಿದ ನ್ಯಾಯಾಲಯವು ವಾರ್ಡ್‌ಗಳ ಸ್ಥಿತಿಗತಿ ಬಗ್ಗೆ ಹಾಗೂ ಮೂಲಸೌಕರ್ಯಕ್ಕೆ ಬೇಕಾಗುವಂತಹ ಮಾಹಿತಿ ಕೇಳಿದ್ದು, ಅದಕ್ಕಾಗಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಕಮಿಟಿ ರಚನೆ ಮಾಡಿ 10 ಜನ ಸದಸ್ಯರನ್ನು ಹೊಂದಬೇಕು. ಇದರಲ್ಲಿ ಐದು ಜನ ಮಹಿಳೆಯರು ಕಡ್ಡಾಯವಾಗಿ ಇರಬೇಕು. ಇವರೆಲ್ಲರೂ ಸೇರಿ ತಮ್ಮ ವಾರ್ಡ್‌ ಅಭಿವೃದ್ಧಿಯಾಗುವಂತಹ ಕ್ರಿಯಾಯೋಜನೆ ತಯಾರಿಸಿ ತಮಗೆ ನೀಡಬೇಕು. ತಾವು ನೀಡಿದ ನಂತರ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.

ಇದರ ಜೊತೆಗೆ ಪಟ್ಟಣದಲ್ಲಿ ಘನ ತ್ಯಾಜ್ಯ, ಪ್ಲಾಸ್ಟಿಕ್‌ ನಿಷೇಧ ಕಟ್ಟುನಿಟ್ಟಾಗಿ ಜಾರಿಗೆ ತರುವುದಕ್ಕಾಗಿ ಮೊದಲಿಗೆ ದಂಡ ರೂಪದಲ್ಲಿ ತಿಳಿ ಹೇಳಲಾಗುವುದು. ತದನಂತರ ಅಂತಹ ಅಂಗಡಿಗಳ ಪರವಾನಗಿ ರದ್ದು ಮಾಡಲಾಗುವುದು. ಸಾರ್ವಜನಿಕರು ಮನೆಗಳ ಮುಂದೆ ಹಸಿ ಕಸ ಚೆಲ್ಲಬಾರದು. ಇದಕ್ಕಾಗಿಯೇ ಪಪಂ ವತಿಯಿಂದ ನಾಲ್ಕು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಇವುಗಳ ಸಮರ್ಪಕ ನಿರ್ವಹಣೆಗೆ ಜಿಪಿಎಸ್‌ ಅಳವಡಿಸಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಂಡು ಪಟ್ಟಣದ ಸೌಂದರ್ಯದ ಜೊತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಹೇಳಿದರು....

ಫೋಟೋ - http://v.duta.us/eUouBwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/K66quQAA

📲 Get Gadag News on Whatsapp 💬