ಮಳೆಗಾಗಿ ವಿವಿಧೆಡೆ ಪೂಜೆ

  |   Bagalkotnews

ಕಲಾದಗಿ: ಮಳೆಯಾಗದೆ ರೈತರು ಕಂಗೆಟ್ಟಿದ್ದು, ಅಂಕಲಗಿ ಗ್ರಾಮದಲ್ಲಿ ಮಳೆಗಾಗಿ ಐದು ಶುಕ್ರವಾರ ದಿವಸ ವಿಶೇಷ ಪೂಜೆ ಪುನಸ್ಕಾರ ಮಾಡಿ ಆರಾಧ್ಯ ದೈವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು.

ಗ್ರಾಮದ ಏಕೈಕ ಆರಾದ್ಯ ದೇವಿ ಲಕ್ಷ್ಮೀದೇವಿಯಲ್ಲಿ ಕಳೆದ ತಿಂಗಳು ಮೇ 24ರಂದು ಆರಂಭಗೊಂಡ ಪೂಜಾ ಕಾರ್ಯಕ್ರಮ ಜೂ. 21ರಂದು ವಿಶೇಷ ಪೂಜಾ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಂಡಿತು. ಗ್ರಾಮದ ಐದು ಮಹಿಳಾ ಮುತ್ತೈದೆಯರು ಪ್ರತಿ ಶುಕ್ರವಾರ ಬೆಳಿಗ್ಗೆ ಮಡಿ ಹುಡಿಯಿಂದ ಒದ್ದೆ ಮೈಯಲ್ಲಿ ಗ್ರಾಮದ ಲಕ್ಷ್ಮೀ ದೇವಾಲಯದವರೆಗೂ ಆಗಮಿಸಿ ದೇವಸ್ಥಾನವನ್ನು ಐದು ಬಾರಿ ಪ್ರದಕ್ಷಿಣೆ ಹಾಕಿ ದೇವಿಗೆ ಪೂಜೆ ಸಲ್ಲಿಸಿದರು. ಮಳೆರಾಯನ ಆಗಮನಕ್ಕಾಗಿ ಪೂಜೆ ಸಲ್ಲಿಸಿ ಮಳೆ ಬೆಳೆ ಸಮೃದ್ಧಿಯಾಗಲಿ ಎಂದು ಬೇಡಿಕೊಂಡರು.

ಕಸ್ತೂರವ್ವ ಗೌಡಪ್ಪ ಯಾದವಾಡ, ಬೇಬಿ ಬಸಪ್ಪ ಪೆಟ್ಲೂರ, ಲಕ್ಷ್ಮೀ ಅಮಿತ ಗೌಡರ, ಲಕ್ಷ್ಮೀ ಕಿಸ್ಟಪ್ಪ ಕೊರಡ್ಡಿ, ನೀಲವ್ವ ಲಚ್ಚಪ್ಪ ಗೌಡರ, ಶ್ವೇತಾ ಮಂಜು ಬಿಲಕೇರಿ, ಲಕ್ಷ್ಮೀ ಬಲುಲೊದ್‌, ಕಸ್ತೂರಿ ಲಕ್ಷ್ಮಣ ಬಲುಲೊದ್‌ ಪೂಜೆಯಲ್ಲಿ ಭಾಗವಹಿಸಿದ್ದರು.ಐದು ವಾರಗಳ ಕಾಲ ವಿಶೇಷ ಪೂಜೆ ಸಲ್ಲಿಸಿ ಕೊನೆಯ ಶುಕ್ರವಾರ ಗ್ರಾಮಸ್ಥರೆಲ್ಲರಿಗೂ ಅನ್ನ ಸಂತರ್ಪಣೆ ಮಾಡಲಾಯಿತು.

ಫೋಟೋ - http://v.duta.us/fxRG0wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/ia4yiAAA

📲 Get Bagalkot News on Whatsapp 💬