ಮಳೆಗೆ ರದ್ದಾದ ಡಿಸಿಎಂ ಜನಸಂಪರ್ಕ ಸಭೆ

  |   Tumkurnews

ಕೊರಟಗೆರೆ: ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್‌ ಗ್ರಾಮದಲ್ಲಿ ಜನಸಂಪರ್ಕ ಸಭೆ ಮಾಡುವ ಮೂಲಕ ಜನರೊಂದಿಗೆ ಸರ್ಕಾರ ಇದೆ ಎಂದು ತೋರಿಸುವ ಸಲುವಾಗಿ ಜಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿ ಶನಿವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆ ಮಳೆ ಯಿಂದ ರದ್ದಾಗಿದೆ.

ಜನಸಂಪರ್ಕ ಸಭೆ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿತ್ತು. ದೂರದ ಊರುಗಳಿಂದ ಸಾವಿರಾರು ಜನ ಅಹವಾಲು ನೀಡಲು ಬಂದಿ ದ್ದರು. ಆದರೆ ಕಾರ್ಯಕ್ರಮ 2 ಗಂಟೆ ತಡವಾಗಿ ಆರಂಭವಾದರೂ ಡಿಸಿಎಂ ಮರಮೇಶ್ವರವೇದಿಕೆ ತಲುಪುತಿದ್ದಂತೆ ಮಳೆ ಬಂದು ಸಭೆ ಮೊಟಕು ಗೊಳಿಸಲಾಯಿತು.

ಜಿಲ್ಲೆಯ ಶಾಸಕರ ಸಹಕಾರದಿಂದ ಜನ ಸಂಪರ್ಕ ಸಭೆ ಆಯೋಜಿಸಿ ಜನರ ಸಮಸ್ಯೆ ಸ್ಥಳದಲ್ಲಿಯೇ ಬಗೆಹರಿಸಲು ಪ್ರಯತ್ನಿಸುತ್ತೇನೆ. ಈ ಸಭೆಯನ್ನು ಮತ್ತೂಂದು ದಿನ ನಡೆಸಿ ಜನರ ಅಹವಾಲು ಸ್ವೀಕರಿಸಿ, ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆಂದು ಡಿಸಿಎಂ ಪರಮೇಶ್ವರ ಭರವಸೆ ನೀಡಿದರು.

ಆಂಗ್ಲ ಮಾಧ್ಯಮ ಮಂಜೂರು: ತೋವಿನಕೆರೆ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಮಂಜೂರು ಮಾಡ ಲಾಗಿದೆ. ಶಾಸಕರ ನಿಧಿಯಿಂದ ಸುಮಾರು 20 ಕಂಪ್ಯೂಟರ್‌ ಒದಗಿಸಲಾಗುವುದು ಎಂದು ಅವರು ಹೇಳಿದರು....

ಫೋಟೋ - http://v.duta.us/uuMSQwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/jOYyuQAA

📲 Get Tumkur News on Whatsapp 💬