ಮಳೆ ಆರ್ಭಟ: ಮನೆಗಳಿಗೆ ನುಗ್ಗಿದ ನೀರು

  |   Uttara-Kannadanews

ಅಂಕೋಲಾ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯ ಆರ್ಭಟಕ್ಕೆ ತಾಲೂಕಿನಲ್ಲಿ ನದಿ, ಹಳ್ಳಗಳು ಉಕ್ಕಿ ಹರಿಯುತ್ತಿದ್ದು ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳು ಜಲಾವೃತಗೊಂಡು ಇಲ್ಲಿನ ನಿವಾಸಿಗಳಿಗೆ ಆತಂಕ ಸೃಷ್ಠಿಸಿದೆ.

ಕಳೆದ ಗುರುವಾರದಿಂದ ಈ ವರೆಗೆ 205 ಮಿ.ಮೀ. ಮಳೆ ಸುರಿದಿದ್ದು, ಮುಂದಿನ 24 ಗಂಟೆ ತಾಲೂಕಿನಲ್ಲಿ ಭಾರಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಎಂದು ತಾಲೂಕಾಡಳಿತ ತಿಳಿಸಿದೆ. ಗಂಗಾವಳಿ ನದಿ ಪಾತ್ರದ ವಾಸರೆ ಕೊಡ್ಸಣಿ ಮತ್ತು ಕುರ್ವೆ ದ್ವಿಪಗಳಲ್ಲಿ ನೆರೆ ಭೀತಿ ಎದುರಾಗಿದೆ. ಪೂಜಗೇರಿ ಹಳ್ಳ ಉಕ್ಕಿ ಹರಿದ ಪರಿಣಾಮ ಪೂಜಗೇರಿ ಮತ್ತು ನದಿಬಾಗ ಗ್ರಾಮದಲ್ಲಿ ಹಳ್ಳದ ನೀರು ಸಮುದ್ರ ಸೇರುವ ಕೊಂಡಿಯು, ಬೇಸಿಗೆಯಲ್ಲಿ ಸಮುದ್ರದ ಅಲೆಯ ರಭಸಕ್ಕೆ ಮರಳಿನಿಂದ ಮುಚ್ಚಿರುವುದರಿಂದ ಹಳ್ಳದ ಹಿನ್ನೀರು ಕೃಷಿ ಭೂಮಿ ಮತ್ತು ಜನವಸತಿ ಪ್ರದೇಶಗಳಿಗೆ ನುಗ್ಗಿ ಅವಘಡಗಳನ್ನು ಸೃಷ್ಠಿಸುತ್ತಿದೆ. ಇದರಿಂದಾಗಿ ಈ ಭಾಗದಲ್ಲಿರುವ ಸುಮಾರು 50ಕ್ಕೂ ಹೆಚ್ಚಾ ಮನೆಗಳು ಜಲಾವೃತಗೊಂಡಿದೆ.

ವಂದಿಗೆ, ಹೊಸಗದ್ದೆ ಬೆಟ್ಟದ ಮೇಲಿನಿಂದ ಮಳೆಗಾಲದಲ್ಲಿ ಹರಿದು ಬರುವ ನೀರು ಇದೇ ಹಳ್ಳದಿಂದ ಸಮುದ್ರ ಸೇರುತ್ತದೆ. ಮಳೆಗಾಲದ ಆರಂಭದಲ್ಲಿ ಮಳೆಯ ರಭಸಕ್ಕೆ ಹಳ್ಳ ತುಂಬಿ ಹರಿಯುವುದರಿಂದ ಸಮುದ್ರ ಸೇರದೆ ಇಲ್ಲಿಯ ಅವಾಂತರಕ್ಕೆ ಕಾರಣವಾಗುತ್ತಿದೆ....

ಫೋಟೋ - http://v.duta.us/HlP-KAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/1DzZtwAA

📲 Get Uttara Kannada News on Whatsapp 💬