ಮಹಾಲಕ್ಷ್ಮೀ-ಕರಗಾಂವ ಏತ ನೀರಾವರಿ ಶೀಘ್ರ ಆರಂಭ: ಡಿಕೆಶಿ

  |   Belgaumnews

ಚಿಕ್ಕೋಡಿ: ತಾಲೂಕಿನ ರೈತರ ಬಹುದಿನಗಳ ಬೇಡಿಕೆಯಾದ ಮಹಾಲಕ್ಷ್ಮೀ ಮತ್ತು ಕರಗಾಂವ ಏತ ನೀರಾವರಿ ಯೋಜನೆಗೆ ಶೀಘ್ರ ಅನುದಾನ ಒದಗಿಸಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಭರವಸೆ ನೀಡಿದರು.

ನಗರಕ್ಕೆ ಶನಿವಾರ ಆಗಮಿಸಿದ ವೇಳೆಯಲ್ಲಿ ಪ್ರವಾಸಿ ಮಂದಿರದಲ್ಲಿ ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹಾಗೂ ಹಿರಿಯ ಧುರೀಣ ಬಿ.ಆರ್‌.ಸಂಗಪ್ಪಗೋಳ ಅವರ ಮನವಿಗೆ ಸ್ಪಂದಿಸಿ ಅವರು ಮಾತನಾಡಿದರು.

ಸಂಗಪ್ಪಗೋಳ ಮಾತನಾಡಿ, ಚಿಕ್ಕೋಡಿ ತಾಲೂಕಿನ ಪಶ್ಚಿಮ ಭಾಗದ 16 ಹಳ್ಳಿಗಳಿಗೆ ನೀರಾವರಿ ಯೋಜನೆ ಕಲ್ಪಿಸುವ ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಈಗಾಗಲೇ ಈ ಯೋಜನೆಗೆ ಸರ್ವೇ ಕಾರ್ಯ ಮುಕ್ತಾಯವಾಗಿ ನೀರಿನ ಹಂಚಿಕೆಯಾಗಿದೆ. 375 ಕೋಟಿ ಅನುದಾನ ಬಿಡುಗಡೆ ಮಾತ್ರ ಬಾಕಿ ಉಳಿದುಕೊಂಡಿದೆ. ಕೂಡಲೇ ಸಚಿವರು ಈ ಯೋಜನೆಗೆ ಹೆಚ್ಚಿನ ಗಮನ ಹರಿಸಿ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ಮುಖ್ಯಸಚೇತಕ ಗಣೇಶ ಹುಕ್ಕೇರಿ, ರಾಯಬಾಗ ಶಾಸಕ ದುರ್ಯೋಧನ ಐಹೋಳೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಕಲ್ಲಪ್ಪ ಮಗೇನ್ನವರ, ಎಚ್.ಎಸ್‌.ನಸಲಾಪೂರೆ, ರವೀಂದ್ರ ಮಿರ್ಜೆ, ಅನೀಲ ಪಾಟೀಲ ಮುಂತಾದವರು ಇದ್ದರು.

ಫೋಟೋ - http://v.duta.us/RpNU_QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/N5AEbQAA

📲 Get Belgaum News on Whatsapp 💬