ಯಕ್ಷಗಾನ ಪ್ರಸಂಗಗಳ ಡಿಜಿಟಲೀಕರಣ’

  |   Udupinews

ಉಡುಪಿ:ಪ್ರಸಂಗಗಳನ್ನು ಡಿಜಿಟಲೀಕರಣ ಮಾಡಿ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್‌ ಮಾಡುವ ಕಾರ್ಯವನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ| ಎಂ.ಎ. ಹೆಗಡೆ ತಿಳಿಸಿದ್ದಾರೆ.

ಶನಿವಾರ ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಉಡುಪಿ ಇಂದ್ರಾಳಿಯ ಯಕ್ಷಗಾನ ಕೇಂದ್ರದ ಸಹಭಾಗಿತ್ವದಲ್ಲಿ ಇಲ್ಲಿನ ಯಕ್ಷಗಾನ ಕೇಂದ್ರದಲ್ಲಿ ಅಂಬಾತನಯ ಮುದ್ರಾಡಿ ಅವರ ‘ಪಂಚಭೂತ ಪ್ರಪಂಚ’ ಮತ್ತು ಕಂದಾವರ ರಘುರಾಮ ಶೆಟ್ಟಿ ಅವರ ‘ಪ್ರಸಂಗ ಪಂಚಮಿ’ ಯಕ್ಷಗಾನ ಪ್ರಸಂಗಗಳ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಕ್ಷಗಾನ ಪ್ರಸಂಗ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ತೀರಾ ಕಡಿಮೆ. ಆದಾಗ್ಯೂ ಪ್ರಸಂಗಗಳು ಜನರಿಗೆ ತಲುಪಬೇಕೆಂಬ ಉದ್ದೇಶ ದಿಂದ ಡಿಜಿಟಲೀಕರಣ ಮಾಡಲಾಗು ವುದು. ಇದನ್ನು ಆಸಕ್ತರು ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳ ಬಹುದು ಎಂದು ಹೇಳಿದರು.

ಪ್ರಸಂಗ ಕೃತಿಗಳನ್ನು ಲೋಕಾರ್ಪಣೆಮಾಡಿದ ಯಕ್ಷಗಾನ ಕೇಂದ್ರದ ಸಂಯೋಜಕ ಪ್ರೊ| ವರದೇಶ ಹಿರೇಗಂಗೆ ಮಾತನಾಡಿ, ‘ಭಾರತೀಯ ರಿಗೆ ಇತಿಹಾಸದ ಬಗ್ಗೆ ಕಾಳಜಿ ಇಲ್ಲ ಎಂಬ ಟೀಕೆಗಳು ಅರ್ಥಹೀನ. ಭಾರತೀಯರು ಪುರಾಣಗಳ ಮೂಲಕವೇ ಐತಿಹಾಸಿಕ ಸತ್ಯವನ್ನು ಗ್ರಹಿಸು ತ್ತಾರೆ ಎಂಬುದು ಅನೇಕ ವಿದ್ವಾಂಸರ ಅಭಿಮತವಾಗಿದೆ’ ಎಂದರು....

ಫೋಟೋ - http://v.duta.us/pAznAQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/K4tVigAA

📲 Get Udupi News on Whatsapp 💬