ರಾಜಕಾಲುವೆ, ಕೆರೆಕಟ್ಟೆ, ಕೋಡಿ ದುರಸ್ತಿ ಮಾಡಿ

  |   Kolar-Karnatakanews

ಕೋಲಾರ: ತಾಲೂಕಿನ ದೊಡ್ಡ ಕೆರೆಯಾಗಿರುವ ಸೋಮಾಂಬುಧಿ ಅಗ್ರಹಾರ ಕೆರೆಯ ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ, ಕೆರೆಯ ಕೋಡಿ, ಕಟ್ಟೆ ದುರಸ್ತಿ ಕಾರ್ಯವನ್ನು ಶೀಘ್ರ ಮುಗಿಸಿ ಎಂದು ಕೆ.ಸಿ. ವ್ಯಾಲಿ ಕಾಮಗಾರಿ ವಹಿಸಿಕೊಂಡಿರುವ ಮೆಘಾ ಕನ್‌ಸ್ಟ್ರಕ್ಷನ್‌ ಕಂಪನಿ ಎಂಡಿಗೆ ಸ್ವೀಕರ್‌ ರಮೇಶ್‌ಕುಮಾರ್‌ ಸೂಚನೆ ನೀಡಿದರು.

ತಾಲೂಕಿನ ಸೋಮಾಂಬುಧಿ ಅಗ್ರಹಾರ ಕೆರೆಗೆ ಶನಿವಾರ ಅಧಿಕಾರಿಗಳೊಂದಿಗೆ ಆಗಮಿಸಿದ್ದ ರಮೇಶ್‌ಕುಮಾರ್‌, ಈ ಕೆರೆಗೆ ನೀರು ಬಂದು ಹಲವು ವರ್ಷಗಳೇ ಉರುಳಿರುವುದರಿಂದ ಇದರ ಕೋಡಿ ಮತ್ತು ಕಟ್ಟೆ ದುರಸ್ತಿಗೆ ಕ್ರಮವಹಿಸಲು ಸೂಚಿಸಿದರು. ರಾಜಕಾಲುವೆಯನ್ನು ಇಂದೇ ಸರಿಪಡಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಿ, ನಂತರ ನೀರು ಹೆಚ್ಚಾದರೆ ಈ ಕೆಲಸ ಮಾಡಲು ಆಗುವುದಿಲ್ಲ ಎಂದು ಹೇಳಿದರು. ರಾಜಕಾಲುವೆಯಲ್ಲಿ ಮರಳಿಗಾಗಿ 15 ಅಡಿ ಆಳದ ಗುಂಡಿಗಳನ್ನು ತೋಡಿರುವುದರಿಂದ ನೀರು ಹರಿಯದೇ ಅಲ್ಲೇ ನಿಲ್ಲುತ್ತಿದ್ದು, ಕೆರೆಯಂಗಳಕ್ಕೆ ಬರುತ್ತಿಲ್ಲ, ಇದನ್ನು ಮೊದಲು ಸರಿಪಡಿಸಲು ಸೂಚಿ ಸಿದ ಅವರು, ನಮ್ಮ ಕಡೆ ನೀರು ಬರಲು ಒಂದು ತಿಂಗಳು ತಡವಾದರೂ ಪರವಾಗಿಲ್ಲ, ಈ ಕೆರೆ ಭರ್ತಿ ಯಾದ ನಂತರ ಕೋಡಿ ಹರಿಯಲಿ, ಈ ದೊಡ್ಡ ಕೆರೆ ತುಂಬಿದರೆ ಈ ಭಾಗದ ಕನಿಷ್ಠ 10 ಕಿ.ಮೀ. ವ್ಯಾಪ್ತಿ ಯಲ್ಲಿ ಅಂತರ್ಜಲ ವೃದ್ಧಿಯಾಗಿ ರೈತರ ಬದುಕು ಹಸನಾಗಲಿದೆ ಎಂದು ಅಭಿಪ್ರಾಯಪಟ್ಟರು....

ಫೋಟೋ - http://v.duta.us/i2PYJAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/mxTzSgEA

📲 Get Kolar Karnataka News on Whatsapp 💬