ರಾಂಪುರ ಕೆರೆಯಲ್ಲಿ ನೊರೆ ಹೆಚ್ಚುವ ಮುನ್ನ ವ್ಯವಸ್ಥೆ ಅತ್ಯಗತ್ಯ

  |   Bangalore-Citynews

ಮಹದೇವಪುರ: ಅಳೆತ್ತರಕ್ಕೆ ಬೆಳೆದ ಜೊಂಡು ಸಸ್ಯ, ಕೊಳಚೆ ನೀರು ಮತ್ತು ತ್ಯಾಜ್ಯದಿಂದ ಹದಗೆಟ್ಟ ರಾಂಪುರ ಕೆರೆಯೂ ಈಗ ಬೆಳ್ಳಂದೂರು, ವರ್ತೂರು ಕೆರೆಯಂತೆ ನೊರೆ ಪ್ರಾರಂಭವಾಗಿದೆ. ವ್ಯವಸ್ಥೆ ಕಲ್ಪಿಸದಿದ್ದರೆ ನೊರೆಯಿಂದ ಪರಿತಪಿಸುವ ದಿನಗಳು ದೂರಿವಿಲ್ಲ.

ಕ್ಷೇತ್ರದ ರಾಂಪುರ ಸಮೀಪ 108 ಎಕರೆ ವಿಸ್ತೀರ್ಣವುಳ್ಳ ಕೆರೆಯ ದುಸ್ಥಿತಿ ಇದು. 2 ದಶಕಗಳ ಹಿಂದೆ ರೈತರ ಜೀವನಾಡಿಯಾಗಿದ್ದ ಕೆರೆಯು ಇಂದು ಕಲುಷಿತ ನೀರಿನಿಂದ ಅವ್ಯವಸ್ಥೆಯ ಅಗರವಾಗಿದೆ.

ಹೆಬ್ಟಾಳ, ನಾಗವಾರ, ಥಣಿಸಂದ್ರ, ಹೆಣ್ಣೂರು, ಗೆದಲ್ಲಹಳ್ಳಿ ಭಾಗದ ಕೊಳಚೆ ನೀರು ಈ ಕರೆಗೆ ಸೇರ್ಪಡೆಯಾಗುತ್ತಿರುವುದರಿಂದ ಹುಳು ತುಂಬಿಕೊಂಡು ವಿವಿದ ಜಾತಿಯ ಸಸ್ಯ ಬೆಳೆದಿದ್ದು ಹುಲ್ಲುಗಾವಲಿನಂತೆ ಭಾಸವಾಗುತ್ತಿದೆ.

ಗೆದಲ್ಲಹಳ್ಳಿ ಸಮೀಪ ಕಲುಷಿತ ನೀರನ್ನು ಶುದ್ಧೀಕರಿಸುವ ಘಟಕವಿದೆ ಅದರೂ ನೀರನ್ನು ಶುದ್ಧೀಕರಿಸಲು ಸಾಮರ್ಥ್ಯ ಕಡಿಮೆ ಇರುವುದರಿಂದ ಕೊಳಚೆ ಮಿಶ್ರಿತ ಚರಂಡಿ ನೀರು ಕೆರೆ ಸೇರುತ್ತಿದೆ. ಇದ್ದರಿಂದ ಬೇಸಾಯಕ್ಕೆ ನೆರವಾಗಿದ್ದ ಕೆರೆಯು ವಿಷಕಾರಿಯಾಗಿದೆ. ಅಲ್ಲದೆ, ಸ್ಥಳಿಯರ ಅರೋಗ್ಯದ ಮೇಲೆ ಪರಿಣಾಮಬಿರುತ್ತಿದೆ.

ರಾಂಪುರ ಕೆರೆಯಲ್ಲೂ ನೊರೆ: ರಾಂಪುರ ಕೆರೆಯಲ್ಲೂ ನೊರೆಯ ಹಾವಳಿ ತಪ್ಪಿಲ್ಲ. ನೊರೆಯಿಂದಾಗಿ ಕೆರೆಯ ಸಮೀಪ ಅಲ್ಪಸಲ್ಪ ಕೃಷಿ ಚಟುವಟಿಕೆ ಮಾಡುತ್ತಿರುವವರ ಪಾಡು ಹೇಳತೀರದು. ಗಾಳಿ ಬಿಸಿದಾಗ ನೊರೆಯು ತರಕಾರಿ ಸೊಪ್ಪುನಂತಹ ಬೆಳೆಗಳ ಮೇಲೆ ಬಿದ್ದರೆ ಬೆಳೆ ನಾಶವಾಗುತ್ತಿದೆ. ಅಲ್ಲದೆ ಸುತ್ತಮುತ್ತಲ ಗ್ರಾಮದ ಮೇಲೂ ಪರಿಣಾಮ ಬೀರುತ್ತಿದೆ....

ಫೋಟೋ - http://v.duta.us/LRyEtgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/KOds7QAA

📲 Get Bangalore City News on Whatsapp 💬