ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಚರ್ಚೆಯಲ್ಲಿ ಪರ-ವಿರೋಧ

  |   Mysorenews

ಮೈಸೂರು: ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಕುರಿತು ರಾಷ್ಟ್ರೀಯ ಶಿಕ್ಷಣ ಚರ್ಚಾ ವೇದಿಕೆ ಏರ್ಪಡಿಸಿದ್ದ ಚರ್ಚೆಯಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಯಿತು. ಮಾನಸ ಗಂಗೋತ್ರಿಯ ಗಾಂಧಿಭವನದಲ್ಲಿ ಶನಿವಾರ ನಡೆದ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜವಾದಿ ಪ. ಮಲ್ಲೇಶ್‌, ಸದ್ಯ ನಮ್ಮೆಲ್ಲರ ಮುಂದೆ ರಾಷ್ಟ್ರೀಯ ಶಿಕ್ಷಣ ನೀತಿ- 2019ರ ಕರಡು ಪ್ರಕಟವಾಗಿದೆ.

ಕೇಂದ್ರ ಸರ್ಕಾರ ಈ ಕರಡನ್ನು ಸಾರ್ವಜನಿಕರ ಅಭಿಪ್ರಾಯ ಕ್ರೋಢೀಕರಿಸಲು ಮಂಡಿಸಿದೆ. ಸಮಗ್ರವಾಗಿ ಈ ಕರಡನ್ನು ಪರಿಶೀಲಿಸಿ ಅದರ ಗುಣದೋಷ ಗುರುತಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಒಂದು ರಾಷ್ಟ್ರದ, ಜನಾಂಗದ ಭವಿಷ್ಯವನ್ನು ರೂಪಿಸುವ, ಬದುಕಿನ ಮಾರ್ಗವನ್ನು ಕಂಡುಕೊಳ್ಳುವ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮೇಲ್ನೋಟಕ್ಕೆ ಆರ್‌ಎಸ್‌ಎಸ್‌ನ ಪ್ರತಿಪಾದಿಸುವ ಹಲವು ಅಂಶಗಳನ್ನು ಈ ಕರಡು ಒಳಗೊಂಡಿದೆ ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರೊ.ಸಿದ್ದೇಗೌಡ, ರಾಷ್ಟ್ರೀಯ ಶಿಕ್ಷಣ ನೀತಿ ಕರಡಿನಲ್ಲಿ ಯಾವುದೇ ಹಿಡನ್‌ ಅಜೆಂಡಾ ಇಲ್ಲ. ಭಾಷೆ ಬಗ್ಗೆ ಮಡಿವಂತಿಕೆ ಬೇಡ. ಮೇಲ್ನೋಟಕ್ಕೆ ಆರ್‌ಎಸ್‌ಎಸ್‌ನ ಹಲವು ಅಂಶಗಳನ್ನು ಒಳಗೊಂಡಿದೆ ಎಂದು ಕಂಡರೂ ವೈಜ್ಞಾನಿಕವಾಗಿ ಎಲ್ಲಾ ಅಂಶಗಳನ್ನು ಹೇಳಲಾಗಿದೆ ಎಂದರು.

ಪತ್ರಕರ್ತ ಕೃಷ್ಣಪ್ರಸಾದ್‌ ಮಾತನಾಡಿ, ಅಂಗನವಾಡಿಯಿಂದ ಪಿಎಚ್‌.ಡಿ ಪದವಿಯವರೆಗಿನ ಶಿಕ್ಷಣ ವ್ಯವಸ್ಥೆ ಸುಧಾರಿಸಬೇಕಿದೆ. ಶಿಕ್ಷಣ ನೀತಿ ಕರಡಿನಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಉನ್ನತ ಶಿಕ್ಷಣದ ಬಗ್ಗೆಯೂ ಹೆಚ್ಚು ಚರ್ಚೆ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ರಿಯಲ್‌ ಎಸ್ಟೇಟ್‌ ವ್ಯಾಪಾರದಂತಾಗಿದೆ. ಪ್ರಾಚೀನ ಭಾಷೆಗಳಾದ ಪಾಲಿ, ಪ್ರಾಕೃತ, ಫ‌‌ರ್ಷಿಯನ್‌ ಮತ್ತು ಸಂಸ್ಕೃತ ಭಾಷೆಗಳ ಬಗ್ಗೆ ಹೆಚ್ಚು ಒತ್ತು ನೀಡಿದ್ದಾರೆ ಎಂದರು....

ಫೋಟೋ - http://v.duta.us/TEZqgAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/IDd-uwAA

📲 Get Mysore News on Whatsapp 💬