ವಿಡಿಯೋ ಮೂಲಕ ಮನ್ಸೂರ್‌ ಪ್ರತ್ಯಕ್ಷ: IMA ವಂಚಕನಿಂದ ಹೊಸ ಬಾಂಬ್‌

  |   Karnatakanews

ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಐಎಂಎ ಮುಖ್ಯಸ್ಥ ಮೊಹಮ್ಮದ್‌ ಮನ್ಸೂರ್‌ ಖಾನ್‌ ಹೊಸ ವಿಡಿಯೋವೊಂದನ್ನು ಭಾನುವಾರ ಬಿಡುಗಡೆ ಮಾಡಿದ್ದು,ಹಲವರಿಂದ ನನಗೆ ಮೋಸ ಆಗಿದೆ ಎಂದು ಹೇಳಿಕೊಂಡಿದ್ದಾನೆ.

ದುಬೈನಿಂದ ಬಿಡುಗಡೆ ಮಾಡಿದ್ದಾನೆ ಎನ್ನಲಾದ 18 ನಿಮಿಷದ ವಿಡಿಯೋದಲ್ಲಿ ಪ್ರಮುಖ ರಾಜಕಾರಣಿಗಳು ಮತ್ತು ಉದ್ಯಮಿಗಳು ನನಗೆ ವಂಚನೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾನೆ.

ರಾಜ್ಯಸಭಾ ಮಾಜಿ ಸದಸ್ಯ ರೆಹಮಾನ್‌ ಖಾನ್‌, ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯ ಶರವಣ, ರಿಯಲ್‌ ಎಸ್ಟೇಟ್‌ ಉದ್ಯಮಿ ಫೈರೋಜ್‌ ಅಬ್‌ದುಲ್‌ , ಪ್ರಸ್ಟೀಜ್‌ ಗ್ರೂಪ್‌ ಮಾಲೀಕ ಇರ್ಫಾನ್‌, ಉಗ್ರರ ಜೊತೆ ಸಂಪರ್ಕ ಇರುವ ಮುಖ್ತಿಯಾರ್‌ ರೆಹಮಾನ್‌ ಸೇರಿ ಕೆಲವರ ಹೆಸರು ಹೇಳಿದ್ದಾನೆ.

ನನಗೆ ಯಾರ್ಯಾರು ತೊಂದರೆಕೊಟ್ಟಿದ್ದಾರೋ ಅವರೆಲ್ಲರ ಹೆಸರುಗಳ ಪಟ್ಟಿಯನ್ನು ತನಿಖಾಧಿಕಾರಿಗಳ ಮುಂದೆ ಇಡುತ್ತೇನೆ ಎಂದು ಹೇಳಿಕೊಂಡಿದ್ದಾನೆ.

13 ವರ್ಷದಲ್ಲಿ 12 ಸಾವಿರ ಕೋಟಿ ರೂಪಾಯಿ ಲಾಭವನ್ನು ಹೂಡಿಕೆದಾರರಿಗೆ ನೀಡಿದ್ದೇನೆ. ನನ್ನ ಬಳಿ ಈಗ 1,350 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ.ಅದನ್ನುಮಾರಿ ಹೂಡಿಕೆದಾರರಿಗೆ ಹಣ ವಾಪಾಸ್‌ ನೀಡುತ್ತೇನೆ ಎಂದು ಹೇಳಿಕೊಂಡಿದ್ದಾನೆ.

ನನ್ನನ್ನು ಮುಗಿಸಲು ರಾಜಕಾರಣಿಗಳು ಮುಂದಾಗಿದ್ದರು. ನನ್ನ ಕುಟುಂಬವನ್ನು ರಕ್ಷಿಸಿಕೊಳ್ಳಬೇಕಾಗಿತ್ತು ಎಂದರು....

ಫೋಟೋ - http://v.duta.us/9JRyhgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/i4DtzgAA

📲 Get Karnatakanews on Whatsapp 💬