ಶೀಘ್ರವೇ “112′ ಮೂಲಕ ಎಲ್ಲ ತುರ್ತು ಸೇವೆಗಳು ಲಭ್ಯ

  |   Karnatakanews

ಬೆಂಗಳೂರು: ಆ್ಯಂಬುಲೆನ್ಸ್‌, ಪೊಲೀಸ್‌ ಸಹಾಯವಾಣಿ ಮತ್ತು ಅಗ್ನಿಶಾಮಕ ದಳ ಸೇರಿ ಇತರ ತುರ್ತು ಸೇವೆಗಳು ಮುಂದಿನ ದಿನಗಳಲ್ಲಿ ಒಂದೇ ದೂರವಾಣಿ ಸಂಖ್ಯೆ ಮೂಲಕ ದೊರೆಯಲಿವೆ. ಭವಿಷ್ಯದಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ವಿದೇಶದ ಮಾದರಿಯಲ್ಲಿ ಒಂದೇ ನಂಬರ್‌ ಮೂಲಕ ಸಾರ್ವಜನಿಕ ತುರ್ತುಸೇವೆಗಳನ್ನು ಒದಗಿಸಲು ರಾಜ್ಯ ಪೊಲೀಸ್‌ ಇಲಾಖೆ ಸಿದ್ಧತೆ ನಡೆಸಿದ್ದು, ಶೇ.90ರಷ್ಟು ಯೋಜನೆ ಪೂರ್ಣಗೊಂಡಿದೆ.

ಈಗಾಗಲೇ ದೇಶದ 16 ರಾಜ್ಯಗಳಲ್ಲಿ ಜಾರಿಯಲ್ಲಿರುವಂತೆ ರಾಜ್ಯದಲ್ಲಿಯೂ ಏಕರೂಪದ ಸಹಾಯವಾಣಿ ಕೇಂದ್ರ ಆರಂಭಿಸುವುದರ ಜತೆಗೆ ಪ್ರಸ್ತುತವಿರುವ 100(ಪೊಲೀಸ್‌ ಸಹಾಯವಾಣಿ), 101(ಅಗ್ನಿಶಾಮಕ ದಳ), 108 (ಆ್ಯಂಬುಲೆನ್ಸ್‌) ರಂತೆಯೇ “112′ ನಂಬರ್‌ ಕಾರ್ಯ ನಿರ್ವಹಿಸಲಿದೆ.

ಒಂದೊಮ್ಮೆ ನೂತನ ವ್ಯವಸ್ಥೆ ಜಾರಿಯಾದರೆ ಸಾರ್ವಜನಿಕರು ತುರ್ತು ಸಂದರ್ಭವಿದ್ದಲ್ಲಿ ಈ ಹಿಂದೆ ಕರೆ ಮಾಡುತ್ತಿದ್ದ ಸಂಖ್ಯೆಗಳ ಬದಲಿಗೆ 112 ನಂಬರ್‌ಗೆ ಕರೆ ಮಾಡಬಹುದು. ಕರೆಗಳನ್ನು ಸ್ವೀಕರಿಸುವ ಆಪರೇಟರ್‌ಗಳು, ಅದನ್ನು ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾಯಿಸಿ, ಈ ಹಿಂದಿನಂತೆ ಸೇವೆ ಒದಗಿಸಲಿದ್ದಾರೆ.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ: ದೇಶಾದ್ಯಂತ ಎಮರ್ಜೆನ್ಸಿ ರೆಸ್ಪಾನ್ಸ್‌ ಸಪೋರ್ಟ್‌ ಸಿಸ್ಟಂ (ಇಆರ್‌ಎಸ್‌ಎಸ್‌) ಆಗಿ ಜಾರಿಗೆ ಬಂದಿರುವ 112 ಸಂಖ್ಯೆಯೂ ರಾಜ್ಯದ ವಿವಿಧ ಜಿಲ್ಲೆಗಳೊಂದಿಗೆ ಸಂಪರ್ಕ ಹೊಂದಿರುತ್ತದೆ. ಅದರ ನಿಯಂತ್ರಣ ಕೊಠಡಿ ನಗರದ ಎಂ.ಜಿ.ರಸ್ತೆಯಲ್ಲಿರುವ ಪೊಲೀಸ್‌ ಸಂವಹನ, ಲಾಜಿಸ್ಟಿಕ್‌ ಮತ್ತು ಆಧುನೀಕರಣ ಕೇಂದ್ರ ಕಚೇರಿ ಆವರಣದಲ್ಲಿರುತ್ತದೆ....

ಫೋಟೋ - http://v.duta.us/GLGP0AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/K1H5PwAA

📲 Get Karnatakanews on Whatsapp 💬