ಶಾಲೆಯಲ್ಲೇ ಮಕ್ಕಳಿಗೆ ಪ್ರಜಾತಂತ್ರದ ಅನುಭವ!

  |   Shimoganews

ಸಾಗರ: ಇತ್ತೀಚಿನ ದಿನಗಳಲ್ಲಿ ಸಾಗರ ತಾಲೂಕು ಪದೇ ಪದೇ ಚುನಾವಣೆಗಳನ್ನು ಕಾಣುತ್ತಿದೆಯಾದರೂ, ಮಕ್ಕಳಿಗೆ ಚುನಾವಣೆಯ ಮತದಾನದ ದಿನ ರಜೆ ಪಡೆಯುವ ಅನುಭವ ಮಾತ್ರವಿತ್ತು. ಆದರೆ ತಾಲೂಕಿನ ಅಮಟೆಕೊಪ್ಪದ ಹೊಂಗಿರಣ ಸ್ಕೂಲ್ ಆಫ್‌ ಎಕ್ಸಲೆನ್ಸ್‌ನಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಮಕ್ಕಳೇ ಮತದಾರರಾಗಿದ್ದರು, ಅಭ್ಯರ್ಥಿಗಳಾಗಿದ್ದರು ಮತ್ತು ಮತ ಎಣಿಕೆ ನಡೆದು ವಿಜೇತರ ಘೋಷಣೆಯಾಯಿತು. ಇದು ಯಾವುದೇ ರೀತಿಯ ಅಣಕು ಚುನಾವಣೆಯಾಗಿರದೆ ಶಾಲೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ನಾಯಕರನ್ನು ಆರಿಸಿಕೊಳ್ಳಲು ನಡೆಸಿದ ಅಪ್ಪಟ ಜನತಾಂತ್ರಿಕತೆಯಾಗಿತ್ತು!

ಜೂ. 10ರಂದು ಚುನಾವಣೆ ಅಧಿಸೂಚನೆ ಹೊರಡಿಸುವುದರೊಂದಿಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿತ್ತು. 11ಕ್ಕೆ ನಾಮಪತ್ರ ಸಲ್ಲಿಸಿದ ವಿದ್ಯಾರ್ಥಿಗಳು ಕೆಲವು ನಿಬಂಧನೆಗಳನ್ನು ದಾಟಿದರೆ ಮಾತ್ರ ನಾಮಪತ್ರ ಸಿಂಧು ಆಗುವ ನಿಯಮ ರೂಪಿಸಲಾಗಿತ್ತು ಎಂದು ಮಾಹಿತಿ ನೀಡುವ ಶಾಲೆಯ ಶಿಕ್ಷಕ, ಮುಖ್ಯ ಚುನಾವಣಾಧಿಕಾರಿ ಸಂದೀಪ್‌ ಶೆಟ್ಟಿ, ಈ ವರ್ಷದ ಚುನಾವಣೆಯಲ್ಲಿ 10ನೇ ತರಗತಿ ಓದುತ್ತಿರುವವರಿಗೆ ಮಾತ್ರ ಅರ್ಹತೆ ಕೊಡಲಾಗಿತ್ತು. ಅವರಲ್ಲೂ 9ರಲ್ಲಿ ಶೇ. 75ಕ್ಕಿಂತ ಹೆಚ್ಚು ಅಂಕ ಪಡೆದವರು, ಕನಿಷ್ಟ ತಾಲೂಕು ಮಟ್ಟದ ಕ್ರೀಡೆ ಅಥವಾ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರು, ಶಾಲೆಯ ಪ್ರಾರ್ಥನೆ ಹಾಗೂ ಸಂವಿಧಾನದ ಮೂಲ ಆಶಯಗಳ ಅರಿವಿದ್ದವರು ಮಾತ್ರ ಸ್ಪರ್ಧಿಸುವ ಅರ್ಹತೆ ಪಡೆಯುತ್ತಾರೆ. ಈ ಬಾರಿ ನಾಮಪತ್ರ ಸಲ್ಲಿಸಿದ ಮೂವರು ಮಕ್ಕಳು ಜೂ. 15ರಂದು ನಡೆದ ಪರಿಶೀಲನೆ ಸಂದರ್ಭದಲ್ಲಿ ಷರತ್ತುಗಳನ್ನು ಸಮರ್ಥವಾಗಿ ಪೂರೈಸಿದರು ಎಂದರು....

ಫೋಟೋ - http://v.duta.us/eTSZdwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/uVOD5QAA

📲 Get Shimoga News on Whatsapp 💬