ಸಚಿವ ಡಿಕೆಶಿಗೆ ಆಕ್ರೋಶದ ಬಿಸಿ

  |   Belgaumnews

ಬೆಳಗಾವಿ: ನದಿ ಬತ್ತಿ ಹೋಗಿ ನೀರು ಇಲ್ಲದೇ ಒದ್ದಾಡುತ್ತಿದ್ದ ಜನರ ಸಮಸ್ಯೆ ಆಲಿಸಲು ಸಚಿವರು ಬರಲಿಲ್ಲ. ಮಹಾರಾಷ್ಟ್ರದಿಂದ ನೀರು ಬಿಟ್ಟಾಗ ಈಗ ಬಂದು ಪೋಸ್‌ ಕೊಡುತ್ತಿರುವುದು ಏಕೆ. ಶಾಶ್ವತವಾಗಿ ನೀರು ಬಿಡುವಂತೆ ಮಹಾರಾಷ್ಟ್ರದ ಮೇಲೆ ಒತ್ತಡ ಹಾಕುವ ಕೆಲಸ ಸರ್ಕಾರ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ವಿವಿಧ ಗ್ರಾಮಗಳ ರೈತರು ಸಚಿವ ಡಿ.ಕೆ. ಶಿವಕುಮಾರಗೆ ಬಿಸಿ ಮುಟ್ಟಿಸಿದರು.

ಸಚಿವರು ಬಂದ ಕಡೆಗಳೆಲ್ಲ ಆಕ್ರೋಶ, ಪ್ರತಿಭಟನೆ, ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ರೈತರು ಹಾಗೂ ಸಾರ್ವಜನಿಕರು, ಮೂರ್‍ನಾಲ್ಕು ತಿಂಗಳಿನಿಂದ ನೀರಿಲ್ಲದೇ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೃಷ್ಣಾ ನದಿ ಹಾಗೂ ಎಲ್ಲ ಬ್ಯಾರೇಜ್‌ಗಳು ಬತ್ತಿ ಹೋಗಿದ್ದವು. ಎಲ್ಲಿಯೂ ನೀರಿಲ್ಲದಂಥ ಸ್ಥಿತಿ ನಿರ್ಮಾಣವಾಗಿತ್ತು. ಆಗ ಯಾರೊಬ್ಬರೂ ಇತ್ತ ಸುಳಿಯಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಂಜರಿ ಬ್ರಿಜ್‌ ಕಂ ಬ್ಯಾರೇಜ್‌ ಸ್ಥಳಕ್ಕೆ ಆಗಮಿಸಿದ ಸಚಿವರನ್ನು ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಪೊಲೀಸರು ತಡೆದರು. ಸಚಿವರತ್ತ ತೆರಳುತ್ತಿದ್ದಾಗ ಅಲ್ಲಿಯೇ ತಡೆದು ಸುಮ್ಮನಾಗಿಸಲು ಯತ್ನಿಸಿದರು. ಆಗ ಪೊಲೀಸರು ಹಾಗೂ ರೈತರೊಂದಿಗೆ ವಾಗ್ವಾದ ನಡೆಯಿತು. ಬಳಿಕ ಪ್ರಭಾಕರ ಕೋರೆ ಅಲ್ಲಿಗೆ ಆಗಮಿಸಿದಾಗ ರೈತರೆಲ್ಲರೂ ಅವರ ಹಿಂದಿನಿಂದ ಓಡಿ ಬಂದು ಸಚಿವರತ್ತ ನುಗ್ಗಲು ಯತ್ನಿಸಿದಾಗ ತಡೆಯಲಾಯಿತು. ಬಾವನ ಸೌಂದತ್ತಿ, ಇಂಗಳಿ, ದಿಗ್ಗೇವಾಡಿ, ಕಲ್ಲೋಳ, ಮಾಂಜರಿ, ಯಡೂರ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು....

ಫೋಟೋ - http://v.duta.us/raTv_gAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/iXLoMQAA

📲 Get Belgaum News on Whatsapp 💬