ಸಾಂಪ್ರದಾಯಿಕ ಕೃಷಿಗೆ ತಂತ್ರಜ್ಞಾನದ ಅಳವಡಿಸಿಕೊಳ್ಳಿ

  |   Ramnagaranews

ಕನಕಪುರ: ರೈತರು ತಮ್ಮ ಸಾಂಪ್ರದಾಯಿಕ ಕೃಷಿಗೆ ತಂತ್ರಜ್ಞಾನದ ಅಳವಡಿಸಿಕೊಂಡು ಕೃಷಿಯಲ್ಲಿ ಯಶಸ್ಸು ಕಾಣಬೇಕು ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಧನಂಜಯ ಹೇಳಿದರು.

ತಾಲೂಕಿನ ಕಸಬಾ ಹೋಬಳಿಯ ಚಿಕ್ಕಮುದುವಾಡಿ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ನಡೆದ ರೈತ ಸಂವಾದ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಸಬಲೀಕರಣಕ್ಕಾಗಿ ಈವರೆಗಿನ ಅನೇಕ ಸರ್ಕಾರಗಳು ಕೃಷಿ ವಿಜ್ಞಾನಿಗಳಿಂದ ಅನೇಕ ತಂತ್ರಜ್ಞಾನದ ಅವಿಷ್ಕಾರ ಮಾಡಿದೆ. ಅದನ್ನು ರೈತರು ಬಳಸಿಕೊಂಡು ಲಾಭದಾಯಕ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡು ಸದೃಢರಾಗಬೇಕು. ದೇಶದ ಆಹಾರ ಸಮಸ್ಯೆಯನ್ನು ನೀಗಬೇಕು. ಈ ನಿಟ್ಟಿನಲ್ಲಿ ಅನ್ನದಾತ ತನ್ನ ಕಾಯಕ ಮುಂದುವರಿಸಬೇಕು ಎಂದರು.

ಹೈನುಗಾರಿಕೆ ರೈತರ ಬದುಕಿನ ಒಡನಾಡಿ: ಪಶುಸಂಗೋಪನೆ ಇಲಾಖೆಯ ಡಾ.ನಿಂಗರಾಜು ಮಾತನಾಡಿ, ಇಂದು ಹೈನುಗಾರಿಕೆ ಜಿಲ್ಲೆಯ ಅನೇಕ ರೈತರ ಬದುಕಿನ ಒಡನಾಡಿಯಾಗಿದ್ದು, ಅದರಿಂದ ನಿರ್ದಿಷ್ಟ ಲಾಭದತ್ತ ಮುನ್ನಡೆಯುತ್ತಿದ್ದಾರೆ. ಇದಕ್ಕೆ ಸರ್ಕಾರವೂ ಸಹ ಸಹಾಯಧನದ ರೂಪದಲ್ಲಿ ಹೈನುಗಾರಿಕೆ ಮಾಡುವ ರೈತರಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಜಿಲ್ಲೆ ಮತ್ತು ತಾಲೂಕು ಹೈನುಗಾರಿಕೆಯಲ್ಲಿ ಮಹತ್ವ ಹೆಜ್ಜೆಗಳನ್ನು ಇಟ್ಟಿದ್ದು, ಅದನ್ನು ಮತ್ತಷ್ಟು ವೃದ್ಧಿಸಿಕೊಂಡು ಆರ್ಥಿಕವಾಗಿ ಮುನ್ನಡೆಯಬೇಕು ಎಂದರು....

ಫೋಟೋ - http://v.duta.us/gIim2wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/7pH1YwAA

📲 Get Ramnagara News on Whatsapp 💬