ಸಮಾನಾಂತರ ಜಲಾಶಯಕ್ಕೆ ಇದೇ ವರ್ಷ ಅಡಿಗಲ್ಲಿಗೆ ಯತ್ನ

  |   Raichurnews

ಸಿಂಧನೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಜೂ.26ರಂದು ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸುತ್ತಿದ್ದು, ಆಗ ಅವರಿಂದಲೇ ನವಲಿ ಬಳಿಯ ಸಮಾನಾಂತರ ಜಲಾಶಯ ನಿರ್ಮಾಣ ಕುರಿತು ಘೋಷಣೆ ಮಾಡಿಸಿ ಇದೇ ವರ್ಷ ಡಿಪಿಆರ್‌ ತಯಾರಿಸಿ, ಹಣಕಾಸು ಇಲಾಖೆಯಿಂದ ಅನುಮತಿ ಪಡೆದು ಅಡಿಗಲ್ಲು ಹಾಕಿಸುವ ಕೆಲಸ ಮಾಡಿಸುತ್ತೇನೆ ಜಂದು ಮೀನುಗಾರಿಕೆ ಮತ್ತು ಪಶು ಸಂಗೋಪನೆ ಖಾತೆ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು.

ನಗರದ ತಮ್ಮ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇನ್ನು ನವಲಿ ಬಳಿ ಸಮಾನಾಂತರ ಜಲಾಶಯ ಹಾಗೂ ಪ್ಲಡ್‌ ಫ್ಲೋ ಕೆನಾಲ್ ಕುರಿತು ಸಿದ್ದರಾಮಯ್ಯ ಸರ್ಕಾರದಲ್ಲಿ ಡಿಪಿಆರ್‌ ಆಗಿದೆ ಎಂದು ಬಾದರ್ಲಿ ಹೇಳುತ್ತಿದ್ದಾರೆ. ಅದರಲ್ಲಿ ಫ್ಲಡ್‌ ಫ್ಲೋ ಕೆನಾಲ್ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ಈ ಮೈತ್ರಿ ಸರ್ಕಾರದಲ್ಲಿ ನಿರಂತರ ನೀರು ಕೊಡುವ ದೃಷ್ಟಿಯಿಂದ ಹೊಸ ಡಿಪಿಆರ್‌ ತಯಾರಿಸಲು ಬೆಂಗಳೂರಿನಲ್ಲಿ ಈಚೆಗೆ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆಯನ್ನು ಮುಖ್ಯಮಂತ್ರಿಗಳ ಸೂಚನೆಯಂತೆ ಕರೆದಿದ್ದೆ. ಅಲ್ಲಿಯಾದರೂ ಹಳೆ ಡಿಪಿಆರ್‌ ತಯಾರಿಸುವ ಬಗ್ಗೆ ಅವರ ಪಕ್ಷದ ಅನುಭವಿ ಶಾಸಕರೇ ಹೇಳಲಿಲ್ಲ. ಕೇವಲ ನೀರಿನ ವಿಷಯ ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಅವರ ಘನತೆಗೆ ಶೋಭೆಯಲ್ಲ. ಐದು ವರ್ಷಗಳ ಕಾಲ ಅವರದೇ ಕಾಂಗ್ರೆಸ್‌ ಸರ್ಕಾರವಿತ್ತು. ಜಲಸಂಪನ್ಮೂಲ ಸಚಿವರು ಅವರ ಒಡನಾಡಿಗಳಾಗಿದ್ದರು. ಆಗಲಾದರೂ ಅನುಭವಿ ಶಾಸಕ ಬಾದರ್ಲಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ, ಬಚಾವತ್‌ ವರದಿ ಜಾರಿ ಹಾಗೂ ತಿದ್ದುಪಡಿಗೆ ಪ್ರಯತ್ನಿಸಬಾರದಿತ್ತೆ ಎಂದು ವ್ಯಂಗ್ಯವಾಡಿದರು....

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/PeRoXAAA

📲 Get Raichur News on Whatsapp 💬