ಸ್ವಯಂ ಸ್ಫೂರ್ತಿಯಿಂದ ಬ್ರಹ್ಮೇತಿ ಕೆರೆ ಹೂಳೆತ್ತಿದ ಗ್ರಾಮಸ್ಥರು!

  |   Uttara-Kannadanews

ಯಲ್ಲಾಪುರ: ಉಳ್ಳವರಿಂದ ಅತಿಕ್ರಮಣ, ಖುಲ್ಲಾಗೊಳಿಸುವುದಕ್ಕೆ ಇಲಖೆ ಹಿಂದೇಟು, ಹೀಗೆ ಹಲವು ಕಾರಣದಿಂದ ಮುಚ್ಚಿ ಹೋಗುವ ಹಂತ ತಲುಪಿದ್ದ ತಾಲೂಕಿನ ನಂದೊಳ್ಳಿ ಸಮೀಪದ ಕಾರಕುಂಕಿ ಬಳಿಯ ಇಡೀ ಊರಿಗೆ ಉಪಯೋಗವಾಗುವ ಪುರಾತನ ಬ್ರಹ್ಮೇತಿ ಕೆರೆ ಪುನರುಜ್ಜೀವನಕ್ಕೆ ಗ್ರಾಮಸ್ಥರೇ ಪಣ ತೊಟ್ಟಿದ್ದಾರೆ.

ಕಳೆದ 3-4 ವರ್ಷಗಳಿಂದ ಸ್ವಂತ ಖರ್ಚಿನಲ್ಲಿ ಕೆರೆಯ ಹೂಳೆತ್ತುವ ಮೂಲಕ ಕೆರೆ ನುಂಗಣ್ಣಗಳಿಂದ ಪಾರುಮಾಡಿ ಕೆರೆ ಜೀರ್ಣೋದ್ಧಾರ ಮಾಡುತ್ತಿದ್ದಾರೆ. ಈ ವರ್ಷವೂ ಕೆರೆಯ ಉಳಿವಿಗೆ ಅದರ ಉಪಯೋಗ ಪಡೆಯುವುದಕ್ಕೆ ಶ್ರಮಿಸಿದ್ದಾರೆ.

ನಂದೊಳ್ಳಿ ಗ್ರಾಮದ ಫಾರೆಸ್ಟ್‌ ಸ.ನಂ 108 ರಲ್ಲಿರುವ ಬ್ರಹ್ಮೇತಿ ಕೆರೆ ಶತಮಾನಗಳಷ್ಟು ಹಳೆಯದಾಗಿದ್ದು, 16 ಎಕರೆಗಿಂತ ಹೆಚ್ಚಿನ ವಿಸ್ತೀರ್ಣ ಹೊಂದಿದೆ. 25 ವರ್ಷಗಳ ಹಿಂದೆ ಜಿಲ್ಲಾ ಪರಿಷತ್‌ನಿಂದ ಒಡ್ಡು ನಿರ್ಮಿಸಿದ್ದು ಬಿಟ್ಟರೆ ನಂತರ ಸರ್ಕಾರದಿಂದ ಅಥವಾ ಅರಣ್ಯ ಇಲಾಖೆಯಿಂದ ಯಾವುದೇ ನಿರ್ವಹಣೆ ಕೈಗೊಂಡಿರಲ್ಲ. ಕಾರಣ ಕೆರೆಯಲ್ಲಿ ಹೂಳು ತುಂಬಿ ಮುಚ್ಚಿ ಹೋಗುವ ಸ್ಥಿತಿಯಲ್ಲಿತ್ತು. ಕೆರೆಯ ಒಂದು ಭಾಗ ಅತಿಕ್ರಮಣಕ್ಕೊಳಗಾಗಿದ್ದಲ್ಲದೇ, ಸುತ್ತಮುತ್ತ ಗಿಡ-ಗಂಟಿಗಳೆಲ್ಲ ಬೆಳೆದು ಕೆರೆಯ ಅಸ್ಥಿತ್ವವೇ ಇಲ್ಲದಂತಾಗಿದೆ. ಒಂದು ಅರ್ಥದಲ್ಲಿ ಕಾಗದಪತ್ರ ನೋಡಿಯೇ ಇದು ಕೆರೆ ಎನ್ನಬೇಕಾದ ಸ್ಥಿತಿ ಇತ್ತು....

ಫೋಟೋ - http://v.duta.us/1nJiAwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/d3RToAAA

📲 Get Uttara Kannada News on Whatsapp 💬