ಹೆಣ್ಣು ಭ್ರೂಣ ಹತ್ಯೆ ತಡೆಗೆ ಶ್ರಮಿಸಿ

  |   Chitradurganews

ಚಿತ್ರದುರ್ಗ: ವೈದ್ಯರನ್ನು ವೈದ್ಯೋ ನಾರಾಯಣೋ ಹರಿ ಎಂದು ಕರೆಯುತ್ತಾರೆ. ಆದರೆ ಬಹುತೇಕ ಖಾಸಗಿ ನರ್ಸಿಂಗ್‌ ಹೋಂಗಳು ಇದಕ್ಕೆ ಅಪವಾದವಾಗಿ ನಡೆದುಕೊಳ್ಳುತ್ತಿವೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ ಬೇಸರ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಇಲಾಖೆಗಳ ಆಶ್ರಯದಲ್ಲಿ ‘ಭೇಟಿ ಬಜಾವೊ ಭೇಟಿ ಪಡಾವೊ’ ಕಾರ್ಯಕ್ರಮದಡಿ ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಮ್‌ಗಳ ಮುಖ್ಯಸ್ಥರು, ವೈದ್ಯರಿಗಾಗಿ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಹಣದಾಸೆಗೆ ಹೆಣ್ಣು ಶಿಶು ಹತ್ಯೆ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು ಹೆಣ್ಣು ಭ್ರೂಣ ಹತ್ಯೆಯನ್ನು ಒಂದು ದಂಧೆಯನ್ನಾಗಿ ಮಾಡಿಕೊಂಡಿವೆ. ಸಮಾಜದಲ್ಲಿ ಈ ದಂಧೆ ಗುಪ್ತಗಾಮಿನಿಯಂತೆ ನಡೆಯುತ್ತಿದೆ. ಹಾಗಾಗಿ ನಾವು ಮನುಷ್ಯರಾ ಎಂದು ಪ್ರಶ್ನಿಕೊಳ್ಳಬೇಕಾಗಿದೆ ಎಂದರು.

ದುಡ್ಡು ಕೊಟ್ಟರೆ ಎಲ್ಲವೂ ಅಂಗೈಯಲ್ಲೇ ಸಿಗುತ್ತಿದೆ. ಇಂದಿನ ವ್ಯವಸ್ಥೆಯನ್ನು ನೋಡಿದರೆ ಈ ವೃತ್ತಿಯನ್ನು ಅಧೋಗತಿಗೆ ತಂದಿದ್ದೇವೆ ಎನ್ನಿಸುತ್ತದೆ. ವೈದ್ಯರಿಗೆ ಮೊದಲು ಇದ್ದಂತಹ ಗೌರವ ಈಗ ಇಲ್ಲ. ಪ್ರತಿ ಹೆಣ್ಣು ಕುಟುಂಬದ ದೇವತೆಆಗಿದ್ದು, ನಮ್ಮಲ್ಲಿ ಹೆಣ್ಣನ್ನು ಪಾರ್ವತಿ, ಸರಸ್ವತಿ, ಲಕ್ಷ್ಮೀ ಎಂದೆಲ್ಲ ಕರೆಯುತ್ತೇವೆ. ಹೆಣ್ಣು ಪೂಜನೀಯ ಸ್ಥಾನದಲ್ಲಿದ್ದರೂ ಭ್ರೂಣ ಹತ್ಯೆ ಅವ್ಯಾಹತವಾಗಿದೆ ಎಂದು ವಿಷಾದಿಸಿದರು....

ಫೋಟೋ - http://v.duta.us/i8yGHQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/UPoeRAAA

📲 Get Chitradurga News on Whatsapp 💬