ಹೆರೂರಿಗೆ ಬರುವೆ, ಸಮಸ್ಯೆಆಲಿಸುವೆ: ಎಚ್‍ಡಿಕೆ

  |   Karnatakanews

ಯಾದಗಿರಿ: ಮಳೆಯಿಂದಾಗಿ ಕಲಬುರಗಿ ಜಿಲ್ಲೆ ಹೆರೂರಿನ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಂದೂಡಲಾಗಿದೆ. ಹೀಗಾಗಿ, ಜನತೆ ನಿರಾಸೆಗೊಳ್ಳುವುದು ಬೇಡ. ಮತ್ತೆ ಬಂದು ಸಮಸ್ಯೆ ಆಲಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಭಯ ನೀಡಿದರು.

ಚಂಡರಕಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಳೆಯಿಂದ ಕಾರ್ಯಕ್ರಮ ಮುಂದೂಡಲಾಗಿದೆ. ಜುಲೈನಲ್ಲಿ ವಿಧಾನಸಭೆ ಅಧಿ ವೇಶನ ನಡೆಯಲಿದ್ದು, ಈ ಮಧ್ಯೆ ಸಮಯ ನೋಡಿಕೊಂಡು ಜುಲೈ ಮೊದಲನೇ ಅಥವಾ ಎರಡನೇ ವಾರದಲ್ಲಿ ಗ್ರಾಮ ವಾಸ್ತವ್ಯ ನಿಗದಿಪಡಿಸುವುದಾಗಿ ಭರವಸೆ ನೀಡಿದರು.

ಹೆರೂರು ಗ್ರಾಮ ಹಾಗೂ ಸುತ್ತಮುತ್ತಲಿನ ಜನರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರದ ಭರವಸೆ ಹೊಂದಿದ್ದರು. ದೊಡ್ಡಮಟ್ಟದ ನಿರೀಕ್ಷೆ ಹೊಂದಿದ್ದರು. ಆದರೆ, ಅನಿವಾರ್ಯವಾಗಿ ಕಾರ್ಯಕ್ರಮ ಮುಂದೂಡಿರುವುದಕ್ಕೆ ಜನರ ಬಳಿ ಕ್ಷಮೆಯಾಚಿಸುವೆ ಎಂದರು.

ಮಳೆಯ ಕಾರಣ ಕಾರ್ಯಕ್ರಮ ಮುಂದೂಡಿರುವುದಕ್ಕಿಂತ ಹೆಚ್ಚಾಗಿ ಈ ಭಾಗದಲ್ಲಿ ಮಳೆಯಾಗಿರುವುದು ತಮಗೆ ಸಂತಸ ತಂದಿದೆ. ಬಿತ್ತನೆ ವೇಳೆಯಲ್ಲಿ ಮಳೆ ಸುರಿದಿರುವುದು ರೈತರಿಗೆ ಆಶಾದಾಯಕವಾಗಿದೆ. ಪ್ರಕೃತಿಯ ಸಹಕಾರ ದೊರೆತಿದೆ ಎಂದರು.

ತಕ್ಷಣವೇ ಕ್ರಮ: ಚಂಡರಕಿಯಲ್ಲಿ ಜನಸ್ಪಂದನ ವೇಳೆ ಸಿವಿಲ್‌ ವ್ಯಾಜ್ಯಗಳನ್ನು ಹೊರತುಪಡಿಸಿ ಶಾಲಾ ಕಟ್ಟಡ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಫಲಾನುಭವಿಗಳ ಕೆಲ ಅರ್ಜಿಗಳು ಬಂದಿದ್ದು, ಪ್ರಮುಖವಾಗಿ ಯುವಕರು ಉದ್ಯೋಗ ಕಲ್ಪಿಸಲು ಮನವಿ ಸಲ್ಲಿಸಿದ್ದಾರೆ. ಅಂಗವಿಕಲರು, ಮಹಿಳೆಯರ ಕೆಲವು ಅರ್ಜಿ, ಆಕಸ್ಮಿಕವಾಗಿ ಚಿಕ್ಕ ವಯಸ್ಸಿನಲ್ಲಿ ಗಂಡ ಇಲ್ಲದೇ ಅನಾನುಕೂಲವಾಗಿ ಉದ್ಯೋಗ ಕೊಡಿಸುವಂತೆ ಮನವಿಗಳು ಬಂದಿವೆ....

ಫೋಟೋ - http://v.duta.us/fx3eTAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/nyGLgAAA

📲 Get Karnatakanews on Whatsapp 💬