ಕಾಗಿನೆಲೆ ಮಾದರಿ ಚೌಡಯ್ಯ ಗವಿ ಅಭಿವೃದ್ಧಿಯಾಗಲಿ

  |   Bidarnews

ಬಸವಕಲ್ಯಾಣ: ನಗರದ ನಿಜ ಶರಣ ಅಂಬಿಗರ ಚೌಡಯ್ಯನವರ ಗವಿ ಸ್ಥಳವನ್ನು ಕಾಗಿನೆಲೆ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘದ‌ ರಾಜ್ಯಾಧ್ಯಕ್ಷ ಬಿ. ಮೌಲಾಲಿ ಒತ್ತಾಯಿಸಿದರು.

ನಗರದ ನಿಜ ಶರಣ ಅಂಬಿಗರ ಚೌಡಯ್ಯನವರ ಗವಿಗೆ ಶನಿವಾರ ಭೇಟಿ ನೀಡಿದಾಗ ವಿವಿಧ ಸಂಘಟನೆಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗವಿ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ಒದಗಿಸಿಬೇಕು ಎಂದು ಆಗ್ರಹಿಸಿದರು.

ಅಂಬಿಗರ ಚೌಡಯ್ಯನವರು ನಡೆದಾಡಿದ ಕರ್ಮಭೂಮಿ ಹಾಗೂ ಐಕ್ಯಭೂಮಿಯಾದ ಚೌಡದಾನಾಪುರ ಈ ಎರಡು ಪುಣ್ಯ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಸಮಾಜ ಬಾಂಧವರು ಒಗ್ಗಟ್ಟಿನಿಂದ ಪ್ರಯತ್ನಿಸಬೇಕಿದೆ ಎಂದರು. ರಾಜ್ಯದ ನಾಲ್ಕು ವಿಭಾಗ ಮಟ್ಟದಲ್ಲಿ ನಮ್ಮ ಸಮುದಾಯದ ಶಾಲಾ-ಕಾಲೇಜು, ಹಾಸ್ಟೇಲ್ಗಳಿಗಾಗಿ 10 ಎಕರೆ ಭೂಮಿ ಹಾಗೂ ತಲಾ ಒಂದು ಸ್ಥಳಕ್ಕೆ 25 ಕೋಟಿ ರೂ. ಅನುದಾನ ಮಂಜೂರು ಮಾಡಬೇಕು ಎಂದು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿದ್ದೇವೆ. ಅದಕ್ಕೆ ಸಕರಾತ್ಮಕ ಉತ್ತರ ಕೂಡ ಸಿಕ್ಕಿದೆ ಎಂದು ತಿಳಿಸಿದರು.

ಟೊಕರೆ ಕೋಲಿಯ 39 ಪರ್ಯಾಯ ಪದಗಳಾದ ಕೋಲಿ, ಕಬ್ಬಲಿಗ, ಗಂಗಾಮತ, ತಳವಾರ, ಬೆಸ್ತ, ಇನ್ನುಳಿದ ಪರ್ಯಾಯ ಪದಗಳಿಂದ ಕರೆಯುವ ಈ ಸಮುದಾಯವನ್ನು ಎಸ್‌ಟಿ ಪಟ್ಟಿಯಲ್ಲಿ ಸೇರಿಸಲು ಹಲವಾರು ಬಾರಿ ನಾನು ಮತ್ತು ಕೇಂದ್ರ ಸಚಿವೆ ಸಾದ್ವಿ ನಿರಂಜನ ಜ್ಯೋತಿ, ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ್‌ ಅವರು ಸೇರಿದಂತೆ ಅನೇಕ ನಾಯಕರು ಪ್ರಧಾನಮಂತ್ರಿ ಮತ್ತು ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಎಸ್‌ಟಿ ಪಟ್ಟಿಯಲ್ಲಿ ಸೇರುವ ಕಾಲ ಸಮೀಪ ಬಂದಿದೆ ಎಂದು ಭವಿಷ್ಯ ನುಡಿದರು....

ಫೋಟೋ - http://v.duta.us/W_omFgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/F2gbkgAA

📲 Get Bidar News on Whatsapp 💬